ಬಂಟ್ವಾಳ, ಮೇ 15, 2024 (ಕರಾವಳಿ ಟೈಮ್ಸ್) : ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಸವಾರರಿಬ್ಬರು ಗಾಯಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಕೆದುಮೂಲೆ ಎಂಬಲ್ಲಿ ಸಂಭವಿಸಿದೆ.
ಗಾಯಾಳುಗಳನ್ನು ಬೈಕ್ ಸವಾರ ಮೊಹಮ್ಮದ್ ಇರ್ಶಾದ್ ಹಾಗೂ ಸಹಸವಾರ ಕುಕ್ಕಿಲ ಝಕಾರಿಯಾ ಅಬೂಬಕ್ಕರ್ ಎಂದು ಹೆಸರಿಸಲಾಗಿದೆ. ಗಾಯಾಳುಗಳ ಪೈಕಿ ಕುಕ್ಕಿಲ ಝಕಾರಿಯಾ ಅಬೂಬಕ್ಕರ್ ಅವರನ್ನು ಪುತ್ತೂರು ಪ್ರಗತಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಕಸಬ ನಿವಾಸಿ ಅಬ್ದುಲ್ ಖಾದರ್ ಎನ್ ಕೆ ಎಂಬವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment