ಬಂಟ್ವಾಳ, ಜೂನ್ 21, 2024 (ಕರಾವಳಿ ಟೈಮ್ಸ್) : ಹಳೆ ತಕಾರಿಗೆ ಸಂಬಂಧಿಸಿ ದಂಪತಿ ಹಾಗೂ ಮಗನಿಗೆ ನೆರೆಮನೆ ನಿವಾಸಿ ಹಲ್ಲೆಗೈದ ಘಟನೆ ಉಳಿ ಗ್ರಾಮದಲ್ಲಿ ಬುಧವಾರ ರಾತ್ರಿ ವೇಳೆ ನಡೆದಿದೆ.
ಹಲ್ಲೆಗೊಳಗಾದವರನ್ನು ಸ್ಥಳೀಯ ನಿವಾಸಿ ಸೇಸಮ್ಮ (36), ಅವರ ಪತಿ ಚಂದ್ರಶೇಖರ ಹಾಗೂ ಮಗ ದೀಪಕ್ ಎಂದು ಹೆಸರಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಸದಾಶಿವ ಹಾಗೂ ಪವನ್ ಎಂದು ಗುರುತಿಸಲಾಗಿದೆ.
ನೆರೆಮನೆ ನಿವಾಸಿಗಳಾದ ಇವರ ಮಧ್ಯೆ ಕಳೆದ ಹಲವು ವರ್ಷಗಳಿಂದ ತಕರಾರಿದ್ದು, ಬುಧವಾರ ರಾತ್ರಿ ಆರೋಪಿ ಸದಾಶಿವ ಅವರು ಚಂದ್ರಶೇಖರ ಅವರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದಿದ್ದು, ಈ ಸಂದರ್ಭ ಸ್ಥಳಕ್ಕೆ ಬಂದ ಮಗ ದೀಪಕ್ ಗೆ ಮತ್ತೋರ್ವ ಆರೋಪಿ ಪವನ್ ಹಲ್ಲೆ ನಡೆಸಿದ್ದಲ್ಲದೆ ಜೀವಬೆದರಿಕೆ ಒಡ್ಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















0 comments:
Post a Comment