ಬಂಟ್ವಾಳ, ಜೂನ್ 29, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಪ್ರಸ್ತುತ ಮುಂಗಾರು ಮಳೆಯ ಸನ್ನಿವೇಶದಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುತ್ತಿರುವವರು ತಕ್ಷಣ ತಮ್ಮ ಸಂಬಂಧಿಕರ ಮನೆಗಳಿಗೆ ಅಥವಾ ಕಾಳಜಿ ಕೇಂದ್ರಕ್ಕೆ ತೆರಳುವುದು. ಸಾರ್ವಜನಿಕರು ವಾಸಿಸುತ್ತಿರುವ ಸ್ಥಳಗಳ ಆಸುಪಾಸಿನಲ್ಲಿ ಯಾವುದಾದರೂ ವಿದ್ಯುತ್ ಕಂಬ ಅಥವಾ ತಂತಿಗಳು ಅಪಾಯಕಾರಿ ಸ್ಥಿತಿಯಲ್ಲಿ ಕಂಡು ಬಂದಲ್ಲಿ, ಮರದ ಕೊಂಬೆಗಳು ತಂತಿಗಳಿಗೆ ತಾಗಿದ್ದಲ್ಲಿ ತಕ್ಷಣ ಪುರಸಭೆ ಅಥವಾ ಮೆಸ್ಕಾಂ ಇಲಾಖೆಗೆ ದೂರು ನೀಡುವುದು. ಅಲ್ಲದೇ ಅಪಾಯದ ಅಂಚಿನಲ್ಲಿರುವ ಸಂಕ/ ಕಾಲು ಸಂಕಗಳನ್ನು ಉಪಯೋಗಿಸಬಾರದು. ಅಗತ್ಯ ಸಂದರ್ಭದಲ್ಲಿ ಸಹಾಯವಾಣಿ ಸಂಖ್ಯೆ 08255-233130ಗೆ ಸಂಪರ್ಕಿಸುವಂತೆ ಪುರಸಭಾ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳ ಜಂಟಿ ಪ್ರಕಟಣೆ ತಿಳಿಸಿದೆ.
29 June 2024
- Blogger Comments
- Facebook Comments
Subscribe to:
Post Comments (Atom)
0 comments:
Post a Comment