ಬಂಟ್ವಾಳ, ಜುಲೈ 31, 2024 (ಕರಾವಳಿ ಟೈಮ್ಸ್) : ಮನೆಯ ಜಾಗದಲ್ಲಿ ದನ ಕರುಗಳು ಮೇಯುತ್ತಿದ್ದ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಜಾನುವಾರುಗಳ ಮಾಲಕ ಅಮಲು ಪದಾರ್ಥ ಸೇವಿಸಿ ಮಾರಕಾಯುಧದಿಂದ ಹಲ್ಲೆ ನಡೆಸಲು ಯತ್ನಿಸಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಸಜಿಪಮೂಡ ಗ್ರಾಮದ ನಿವಾಸಿ ಜೆರಾಲ್ಡ್ ಬರೆಟ್ಟೋ ಅವರು ಮಂಗಳವಾರ ಸಂಜೆ ಕೆಲಸದಿಂದ ಮನೆಗೆ ಬರುವಾಗ, ಆರೋಪಿ ಸುನಿಲ್ ಬರೆಟ್ಟೋ ಅವರಿಗೆ ಸೇರಿದ ದನ ಕರುಗಳು ಮನೆಯ ಜಾಗದಲ್ಲಿ ಮೇಯುತ್ತಿತ್ತು, ಈ ಬಗ್ಗೆ ಜೆರಾಲ್ಡ್ ಬರೆಟ್ಟೊ ಅವರು ಆರೋಪಿ ಸುನಿಲ್ ಬರೆಟ್ಟೋ ಅವರಿಗೆ ಪೋನ್ ಕರೆ ಮಾಡಿ ಪ್ರಶ್ನಿಸಿದ್ದಾರೆ. ಆ ಸಂದರ್ಭ ಆರೋಪಿ ಸುನಿಲ್ ಬರೆಟ್ಟೋ ಅಮಲು ಪದಾರ್ಥ ಸೇವಿಸಿ ಮಾರಕಾಯುಧ ಹಿಡಿದು, ತನ್ನ ಮಗನೊಂದಿಗೆ ಜೆರಾಲ್ಡ್ ಬರೆಟ್ಟೊ ಅವರ ಮನೆಗೆ ಬಂದು, ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಪ್ರಯತ್ನಿಸಿರುತ್ತಾನೆ. ಬಳಿಕ ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment