ಬಂಟ್ವಾಳ, ಜುಲೈ 20, 2024 (ಕರಾವಳಿ ಟೈಮ್ಸ್) : ಪೆಂಡಲ್ ಹಾಕಲು ಲಾರಿಯಿಂದ ಶಾಮಿಯಾನ ಸಾಮಾಗ್ರಿಗಳನ್ನು ಇಳಿಸುವ ವೇಳೆ ವಿದ್ಯುತ್ ತಂತಿ ಸ್ಪರ್ಶಗೊಂಡು ಓರ್ವ ಕಾರ್ಮಿಕ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಡೇಶ್ವಾಲ್ಯ ಸಮೀಪದ ಕಾಡಬೆಟ್ಟು ಎಂಬಲ್ಲಿ ಸೋಮವಾರ ನಡೆದಿದೆ.
ಮೃತ ಯುವಕನನ್ನು ಬಿಹಾರ ಮೂಲದ ಕುಂದನ್ ಕುಮಾರ್ (20) ಎಂದು ಹೆಸರಿಸಲಾಗಿದೆ. ಗಾಯಾಳುಗಳನ್ನು ಜಾರ್ಖಂಡ್ ಮೂಲದ ಬಬ್ಲು, ಪ್ರದೀಪ್, ಪಶ್ಚಿಮ ಬಂಗಾಳ ಮೂಲದ ರೋಹಿತ್ ಹಾಗೂ ಸ್ಥಳೀಯ ಕಡೇಶ್ವಾಲ್ಯ ನಿವಾಸಿ ಪ್ರಸನ್ನ ಎಂದು ಗುರುತಿಸಲಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಲ್ಲಡ್ಕ ಸಾಲ್ಯಾನ್ ಸರ್ವಿಸ್ ಸಂಸ್ಥೆಗೆ ಸೇರಿದ ಕಾರ್ಮಿಕರು ಇವರು ಎನ್ನಲಾಗಿದ್ದು, ಲಾರಿಯಿಂದ ಶಾಮಿಯಾನದ ಸಾಮಾಗ್ರಿಗಳನ್ನು ಇಳಿಸುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರಾವಸ್ಥೆಯಲ್ಲಿದ್ದ ಕುಂದನ್ ಕುಮಾರ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment