ಮಂಗಳೂರು, ಜುಲೈ 30, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದು, ಮಂಗಳವಾರ ಇಲ್ಲಿನ ಜೀವನದಿಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನೀರನ ಮಟ್ಟದಲ್ಲಿ ವಿಪರೀತ ಏರಿಕೆ ಉಂಟಾಗಿರುವುದರಿAದ ಹಲವೆಡೆ ದ್ವೀಪದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ವಿವಿಧೆಡೆ ಗುಡ್ಡ ಕುಸಿತದಂತಹ ಗಂಭೀರ ಅನಾಹುತಗಳು ಸಂಭವಿಸಿ ಹೆದ್ದಾರಿ, ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರವೇ ಬಾಧಿತವಾಗಿದೆ. ಈ ಮಧ್ಯೆ ಜಿಲ್ಲಾಡಳಿತ ಈಗಲೂ ಎಂದಿನAತೆ ಅಂಗನವಾಡಿ, ಶಾಲೆ, ಪಿಯು ತರಗತಿಗಳವರೆಗೆ ಮಾತ್ರ ರಜೆ ಘೋಷಿಸಿ ಪದವಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳ ಸರುಕ್ಷತೆ ಕಡಗಣಿಸಿರುವ ಬಗ್ಗೆ ವಿದ್ಯಾರ್ಥಿ ಸಮೂಹದಿಂದ ವ್ಯಾಪಾಕ ಅಸಮಾಧಾನದ ಮಾತುಗಳು ಕೇಳಿ ಬಂದಿದೆ.
ಸಣ್ಣ ತರಗತಿಗಳ ಮಕ್ಕಳಾದರೋ ಶಾಲಾ ವಾಹನಗಳಲ್ಲಿ ಅಥವಾ ಖಾಸಗಿ ವಾಹನಗಳಲ್ಲಿ ಹೆತ್ತವರ, ಪೋಷಕರ ಅಥವಾ ಶಾಲಾಡಳಿತಗಳ ಮುತುವರ್ಜಿಯಿಂದ ಶಾಲಾ ಆವರಣದವರೆಗೂ ಸುರಕ್ಷಿತಾಗಿ ತಲುಪುತ್ತಿದ್ದು, ಪದವಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳಾದರೋ ಸ್ವ ಜವಾಬ್ದಾರಿಯಿಂದ ಸರಕಾರಿ, ಖಾಸಗಿ ಬಸ್ಸು ಅಥವಾ ಇನ್ನಿತರ ವಾಹನಗಳನ್ನು ಅವಲಂಬಿಸಿ ಒಂದು ಪೇಟೆ-ಪಟ್ಟಣದಿಂದ ಇನ್ನೊಂದು ಪೇಟೆ-ಪಟ್ಟಣವನ್ನೂ ದಾಟಿ ಹಲವು ಕಾಲೇಜುಗಳಿಗೆ ತೆರಳಬೇಕಾಗಿದೆ. ಮಳೆ ಜೋರಾಗಿ ಬರುತ್ತಿರುವ ಸಂದರ್ಭ ಹಾಗೂ ಪ್ರವಾಹದ ಸಂದರ್ಭಗಳಲ್ಲಿ ಇಂತಹ ವಿದ್ಯಾರ್ಥಿಗಳು ಪಡುವ ಪಾಡು ಅಷ್ಟಿಷ್ಟಲ್ಲ. ಆದರೆ ರಜೆ ಘೋಷಣೆ ಮಾಡುವ ಜಿಲ್ಲಾಡಳಿತ ನೀಡುವ ಸಬೂಬು ಏನೆಂದರೆ ಸಣ್ಣ ಮಕ್ಕಳಿಗಿಂತ ಪದವಿ ವಿದ್ಯಾರ್ಥಿಗಳು ವಯಸ್ಸಿನಲ್ಲಿ ದೊಡ್ಡವರಿದ್ದು, ಅಪಾಯಗಳನ್ನು ಸ್ವಯಂ ಅಂದಾಜಿಸಲು ಸಮರ್ಥರಿರುತ್ತಾರೆ ಎಂಬುದಾಗಿದೆ. ಜಿಲ್ಲಾಡಳಿತದ ಪ್ರಕಾರ ಪದವಿ ವಿದ್ಯಾರ್ಥಿಗಳು ಸ್ವಯಂ ಅಪಾಯವನ್ನು ಮನಗಂಡು ತರಗತಿಗೆ ರಜೆ ಪಡೆದುಕೊಂಡರೆ ಮುಂದಿನ ದಿನಗಳಲ್ಲಿ ಕಾಲೇಜು ಆಡಳಿತ ಮಂಡಳಿ ಹಾಜರಾತಿ ಕೊರತೆ (ಎಟೆಡೆನ್ಸ್ ಶಾರ್ಟೇಜ್) ನೆಪದಲ್ಲಿ ಇನ್ನಿಲ್ಲದಂತೆ ವಸೂಲಾತಿ ನಡೆಸಲೂ ಜಿಲ್ಲಾಡಳಿತದ ಈ ನಿರ್ಧಾರ ಅವಕಾಶ ಮಾಡಿಕೊಡಲಿದೆ ಎಂಬ ಆರೋಪ ದೊಡ್ಡ ವಿದ್ಯಾರ್ಥಿಗಳದ್ದು. ಅಲ್ಲದೆ ಪದವಿ ಆದ ತಕ್ಷಣ ನಾವೇನು ಆಕಾಶದಲ್ಲಿ ಹಾರಾಡಿಕೊಂಡು ಹೋಗಬೇಕೋ ಅಥವಾ ನಾವೇನು ವಾಟರ್ ಪ್ರೂಫ್ ಆಗಿ ಸೃಷ್ಟಿಸಲ್ಪಟ್ಟಿದ್ದೇವೋ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಮುಂದಿನ ದಿನಗಳಲ್ಲಾದರೂ ಜಿಲ್ಲಾಡಳಿತ ವಿದ್ಯಾರ್ಥಿ ಸಮೂಹವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವಂತೆ ವಿದ್ಯಾರ್ಥಿ ಸಮೂಹ ಹಾಗೂ ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.
0 comments:
Post a Comment