ಬಂಟ್ವಾಳ, ಜುಲೈ 06, 2024 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನಲೆಯಲ್ಲಿ ಹಲವೆಡೆ ಮಳೆ ಹಾನಿ ಪ್ರಕರಣಗಳು ವರದಿಯಾಗಿದ್ದು, ತೀವ್ರ ನಷ್ಟ ಉಂಟಾಗಿದೆ.
ಇರ್ವತ್ತೂರು ಗ್ರಾಮದ ನಿವಾಸಿ ನವೀನ್ ಬಿನ್ ಪದ್ಮ ಮೂಲ್ಯ ಅವರ ದನದ ಹಟ್ಟಿಗೆ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ಮಜಲು ನಿವಾಸಿ ರಾಮಣ್ಣ ನಾಯಕ್ ಅವರ ಮನೆಗೆ ಮರ ಬಿದ್ದು ಭಾಗಶ: ಹಾನಿಯಾಗಿದೆ.
ವೀರಕಂಭ ಗ್ರಾಮದ ಬಾಯಿಲ ನಿವಾಸಿ ಕಲ್ಯಾಣಿ ಅವರ ಮನೆ ಗೋಡೆ ಕುಸಿದು ಬಿದ್ದು ಹಾನಿಯಾಗಿದೆ.
ಪೆರ್ನೆ ಗ್ರಾಮದ ಗಿಟ್ಟದಡ್ಕ ನಿವಾಸಿ ಸೀತಾ ಕೋಂ ಶಿವಪ್ಪ ನಾಯ್ಕ ಅವರ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ. ಕುರಿಯಾಳ ಗ್ರಾಮದ ಕುರಿಯಾಳಪಡು ನಿವಾಸಿ ಉಗ್ಗಪ್ಪ ಪೂಜಾರಿ ಅವರ ಮನೆಯ ಪಕ್ಕದ ಕೊಟ್ಟಿಗೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಅಳಕೆಮಜಲು ನಿವಾಸಿ ಶೀನ ಬಿನ್ ಐತ ಅವರ ಮನೆಯ ಶೌಚಾಲಯಕ್ಕೆ ತೀವ್ರ ಹಾನಿಯಾಗಿದೆ.























0 comments:
Post a Comment