ಬಂಟ್ವಾಳ, ಆಗಸ್ಟ್ 19, 2024 (ಕರಾವಳಿ ಟೈಮ್ಸ್) : ಸೆಲೂನ್ ಬಳಿ ನಿಂತಿದ್ದ ವ್ಯಕ್ತಿಗೆ ಬೈಕಿನಲ್ಲಿ ಬಂದ ಆರೋಪಿ ಹಲ್ಲೆ ನಡೆಸಿದ ಘಟನೆ ಪುದು ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಪುದು ಗ್ರಾಮದ ನಿವಾಸಿ ನವಾಝ್ ಮೊಹಮ್ಮದ್ ಎಂದು ಹೆಸರಿಸಲಾಗಿದೆ. ಆರೋಪಿತ ವ್ಯಕ್ತಿಯನ್ನು ಫೈಝಲ್ ಯಾನೆ ಪಜ್ಜು ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ನವಾಝ್ ಅವರು ತನ್ನ ಮನೆ ಸಮೀಪದ ಸೆಲೂನ್ ಬಳಿ ನಿಂತಿದ್ದ ವೇಳೆ ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಫಿ ಫೈಝಲ್ ಎಂಬಾತನ ನವಾಝನ ಅಕ್ಕನ ಮಗ ಅಫೀಜ್ ಬಗ್ಗೆ ವಿಚಾರಿಸಿದ್ದಾನೆ. ಈ ವೇಳೆ ನವಾಝ್ ನನಗೆ ಗೊತ್ತಿಲ್ಲ ಎಂದಿದ್ದು, ಈ ವೇಳೆ ಆರೋಪಿ ಅವಾಚ್ಯವಾಗಿ ಬೈದು ದ್ವಿಚಕ್ರ ವಾಹನದಲ್ಲಿದ್ದ ಮರದ ಸೋಂಟೆಯನ್ನು ತೆಗೆದು ಹಲ್ಲೆ ನಡೆಸಿದ್ದಾನೆ. ಈ ವೇಳೆ ನವಾಝ್ ಬೊಬ್ಬೆ ಹಾಕಿದಾಗ ಆರೋಪಿ ಅಲ್ಲಿಂದ ತೆರಳಿದ್ದಾನೆ. ಗಾಯಾಳು ನವಾಝ್ ಚಿಕಿತ್ಸೆಗಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment