ಬಂಟ್ವಾಳ, ಸೆಪ್ಟೆಂಬರ್ 29, 2024 (ಕರಾವಳಿ ಟೈಮ್ಸ್) : ಕಾರ್ಮಿಕರ ಮೇಲೆ ಇಂದು ನಿರಂತರವಾಗಿ ದಾಳಿಗಳು ನಡೆಯುತ್ತಿದ್ದು ಕಾರ್ಮಿಕರು ಹೋರಾಟದ ಮೂಲಕ ಗಳಿಸಿದ ಹಕ್ಕುಗಳನ್ನು ಕಸಿದುಕೊಂಡು ಕಾರ್ಮಿಕರನ್ನು ಗುಲಾಮರನ್ನಾಗಿಸಲಾಗುತ್ತಿದೆ, ಕೇಂದ್ರದ ಮೋದಿ ಸರಕಾರವು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಮಾಲಕರಿಗೆ ಅನುಕೂಲವಾಗಿಸುತ್ತಿದೆ ಎಂದು ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪಿ ಪಿ ಅಪ್ಪಣ್ಣ ಹೇಳಿದರು.
ಬಿ ಸಿ ರೋಡಿನಲ್ಲಿ ಭಾನುವಾರ ನಡೆದ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎಐಸಿಸಿಟಿಯು) ದ ಕ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಮಿಕರು ವರ್ಗ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಆ ಮೂಲಕ ಆಳುವ ವರ್ಗಗಳಿಗೆ ಪ್ರತಿರೋಧ ಒಡ್ಡಬೇಕು. ಎಐಸಿಸಿಟಿಯು ಕರ್ನಾಟಕ ರಾಜ್ಯ ಸಮೇಳನವು ನವೆಂಬರ್ 24-25 ರಂದು ಬಿಸಿ ರೋಡಿನಲ್ಲಿ ನಡೆಯಲಿದ್ದು, ಸಮ್ಮೇಳನವನ್ನು ಕಾರ್ಮಿಕರು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಮಾತನಾಡಿ, ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಬಲಿಷ್ಠ ಹೋರಾಟ ನಡೆಸಬೇಕೆಂದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮೋಹನ್ ಕೆ ಇ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂಘಟನೆಯ ಜಿಲ್ಲಾದ್ಯಕ್ಷ ರಾಮಣ್ಣ ವಿಟ್ಲ ಅದ್ಯಕ್ಷೀಯ ಭಾಷಣ ಮಾಡಿದರು.
ಸಮ್ಮೇಳನವನ್ನುದ್ದೇಶಿಸಿ ಎಐಸಿಸಿಟಿಯು ಜಿಲ್ಲಾ ಮುಖಂಡರಾದ ಭರತ್ ಮಂಗಳೂರು, ಸತೀಶ್ ಕುಮಾರ್ ಮಂಗಳೂರು, ಮಹಾವೀರ್ ಜೈನ್ ಪುತ್ತೂರು, ಸಂಜೀವ ಬೆಳ್ತಂಗಡಿ, ಅಕ್ಷರ ದಾಸೋಹ ನೌಕರರ ಸಂಘಟನೆಯ ಮುಖಂಡ ಜಯಶ್ರೀ ಅರ್ ಕೆ ಮಾತನಾಡಿದರು.
ಎಐಸಿಸಿಟಿಯು ಮುಖಂಡರಾದ ಮಾರ್ಟಿನ್ ಕಕ್ಕಿಂಜೆ, ಮಧು ಕುಮಾರ್, ಅಟೋ ರಿಕ್ಷಾ ಚಾಲಕರ ಸಂಘಟನೆಯ ಮುಖಂಡರಾದ ಅಶ್ರಫ್ ಕೊಯಿಲ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ಮುಖಂಡರಾದ ಕುಸುಮ ಬೆಳ್ತಂಗಡಿ ಭಾಗವಹಿಸಿದ್ದರು.
ಇದೇ ವೇಳೆ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ರಾಮಣ್ಣ ವಿಟ್ಲ, ಕಾರ್ಯದರ್ಶಿಯಾಗಿ ಮೋಹನ್ ಕೆಇ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಜಯಶ್ರೀ ಆರ್ ಕೆ, ವಾಣಿಶ್ರೀ, ಮಾರ್ಟಿನ್ ಕಕ್ಕಿಂಜೆ, ಸಂಜೀವ ಬೆಳ್ತಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಸತೀಶ್ ಕುಮಾರ್ ಮಂಗಳೂರು, ಭರತ್ ಮಂಗಳೂರು, ಸಜೇಶ್ ವಿಟ್ಲ, ಕುಸುಮ ಬೆಳ್ತಂಗಡಿ, ಕೋಶಾಧಿಕಾರಿಯಾಗಿ ಸರಸ್ವತಿ ಮಾಣಿ, ಸಮಿತಿ ಸದಸ್ಯರುಗಳಾಗಿ ಅಶ್ರಫ್ ಕೊಯಿಲ, ಮಹಾವೀರ್ ಜೈನ್ ಪುತ್ತೂರು, ವಿನಯ ನಡುಮುಗೇರು, ಶಿವರಾಯ ಪ್ರಭು, ಮಧು ಕುಮಾರ್, ಅಚ್ಯುತ ಕಟ್ಟೆ, ಕುಂಞಪ್ಪ ಮೂಲ್ಯ, ಅಪ್ಪು ನಾಯ್ಕ, ಕೂಸಪ್ಪ ನಾಯ್ಕ, ಸುಲೈಮಾನ್ ಅವರನ್ನು ಆರಿಸಲಾಯಿತು.
0 comments:
Post a Comment