ಮಂಗಳೂರು, ಸೆಪ್ಟೆಂಬರ್ 01, 2024 (ಕರಾವಳಿ ಟೈಮ್ಸ್) : ಅಡ್ಡೂರು ಮಿನಿ ಪಾಕಿಸ್ತಾನ ಹೇಳಿಕೆ ನೀಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಬಂಧನಕ್ಕೆ ಆಗ್ರಹಿಸಿ ಅಡ್ಡೂರು ನಾಗರಿಕ ಸಮಿತಿ ನೇತೃತ್ವದಲ್ಲಿ ಭಾನುವಾರ ಅಡ್ಡೂರು ಜಂಕ್ಷನ್ನಿನಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಅಡ್ಡೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಸ್ವದಖತುಲ್ಲಾ ಫೈಝಿ, ಜಿ ಪಂ ಮಾಜಿ ಸದಸ್ಯ ಯು ಪಿ ಇಬ್ರಾಹಿಂ, ಅಶ್ರಫ್ ನಡುಗುಡ್ಡೆ ಮಾತನಾಡಿದರು.
ಈ ಸಂದರ್ಭ ಅಡ್ಡೂರು ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ ಅಂಗಡಿ ಮನೆ, ಉಪಾಧ್ಯಕ್ಷರಾದ ಎ ಕೆ ಅಶ್ರಫ್, ಹಾಜಿ ಎಂ ಎಚ್ ಮೊಯ್ದೀನ್, ಅಡ್ಡೂರು ಅಲ್ ಬಿರ್ರ್ ಅಧ್ಯಕ್ಷ ಎಂ ಎಸ್ ಶೇಖಬ್ಬ, ಜಾಬಿರ್ ಫೈಝಿ, ಗುರುಪುರ ಗ್ರಾಮ ಪಂಚಾಯತ್ ಸದಸ್ಯರ ಸಹಿತ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಭಾಗವಹಿಸಿದ್ದರು. ಬದ್ರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಝೈನುದ್ದೀನ್ ಸ್ವಾಗತಿಸಿ, ಅಸ್ತರ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment