ಕಡಬ, ಸೆಪ್ಟೆಂಬರ್ 18, 2024 (ಕರಾವಳಿ ಟೈಮ್ಸ್) : ಮನೆಯ ಗೋದ್ರೆಜಿನಲ್ಲಿರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಾಣೆಯಾದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕು, ಏನೆಕಲ್ಲು ಗ್ರಾಮದ ನಿವಾಸಿ ಹರೀಶ್ ಪಿ (60) ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರ ಪತ್ನಿ ಶ್ರೀಮತಿ ವೇದಾವತಿ ಅವರು ಕಳೆದ ಜೂನ್ 6 ರಂದು ಮದ್ಯಾಹ್ನ ಅವರ 84 ಗ್ರಾಂ ಚಿನ್ನಾಭರಣಗಳನ್ನು ಶುಚಿಗೊಳಿಸಿ ಮನೆಯೊಳಗಿನ ಗೋದ್ರೆಜ್ ಲಾಕರಿನಲ್ಲಿರಿಸಿದ್ದರು. ಸೆ 17 ರಂದು ಅವರು ಗೋದ್ರೆಜ್ ತೆರೆದು ನೋಡಿದಾಗ ಚಿನ್ನಾಭರಣಗಳು ಕಾಣೆಯಾಗಿದೆ. ಕಾಣೆಯಾದ ಚಿನ್ನಾಭರಣಗಳ ಮೌಲ್ಯ 5 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ಜೂನ್ 6 ರಿಂದ ಸೆ 17 ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮನೆಗೆ ನುಗ್ಗಿ ಮನೆಯ ಒಳಗಿನ ಗೋದ್ರೆಜ್ ಲಾಕರಿನಲ್ಲಿರಿಸಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment