ಬೆಂಗಳೂರು, ಸೆಪ್ಟೆಂಬರ್ 23, 2024 (ಕರಾವಳಿ ಟೈಮ್ಸ್) : ಕಟ್ಟಡ ಮತ್ತು ಇತರ ಕಾರ್ಮಿಕರ ಮಕ್ಕಳ (ವಿದ್ಯಾರ್ಥಿಗಳ) 2024-25ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಎಸ್ ಎಸ್ ಪಿ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭಗೊಂಡಿದೆ.
ವಿದ್ಯಾರ್ಥಿಯು 2024-25 ರ ಸಾಲಿನ ವಿದ್ಯಾರ್ಥಿವೇತನಕ್ಕೆ ಎಸ್ ಎಸ್ ಪಿ ಮೂಲಕ ಇತರ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೆ ಅವರು ಮತ್ತೆ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ. ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ನವೆಂಬರ್ 30 ಆಗಿದೆ. ಎಸ್ ಎಸ್ ಪಿ ಸ್ಕಾಲರ್ ಶಿಪ್ ಅರ್ಜಿಯ ಪರಿಗಣನೆಗಾಗಿ ಕಾರ್ಮಿಕರು ಕಡ್ಡಾಯವಾಗಿ ತಮ್ಮ ಸೇವಾ ಸಿಂಧು ಲೇಬರ್ ಕಾರ್ಡ್ ಅನ್ನು KBOCWWB ಯಲ್ಲಿ ಮೊದಲು ಅಪ್ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
0 comments:
Post a Comment