ಬಂಟ್ವಾಳ, ಸೆಪ್ಟೆಂಬರ್ 27, 2024 (ಕರಾವಳಿ ಟೈಮ್ಸ್) : ತಾಲೂಕಿನ ಮಾಣಿ ಜಂಕ್ಷನ್ನಿನಲ್ಲಿರುವ ಬಿ ಎಸ್ ಎನ್ ಎಲ್ ಟೆಲಿಫೋನ್ ಎಕ್ಸ್ ಚೇಂಜ್ ಒಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವುಗೈದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾಣಿ ನಿವಾಸಿ, ಬಿ ಎಸ್ ಎನ್ ಎಲ್ ಟವರ್ ಟೆಕ್ನಿಷಿಯನ್ ಯಾದವ ಶೆಟ್ಟಿ (38) ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಇವರು ಮೇ 13 ರಂದು ಮಧ್ಯಾಹ್ನ ಮಾಣಿ ಮುಖ್ಯ ಪೇಟೆಯ, ಬಿ ಎಸ್ ಎನ್ ಎಲ್ ಟವರ್ ಗೆ ಭೇಟಿ ನೀಡಿದಾಗ ಎಕ್ಸ್ ಚೆಂಜ್ ನ ಒಳಗೆ ಇದ್ದ ಸುಮಾರು 2 ಲಕ್ಷದ 12 ಸಾವಿರದ 740 ರೂಪಾಯಿ ಮೌಲ್ಯದ 600 AH EXIDE 24 ಟವರ್ ಬ್ಯಾಟರಿಗಳು, ಸುಮಾರು 15 ಸಾವಿರ ರೂಪಾಯಿ ಮೌಲ್ಯದ MDF ರೂಮಿನ COPPER ಕೇಬಲ್ , ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಲ್ಯಾಂಡ್ ಲೈನ್ ಫೋನಿನ ಎಲೆಕ್ಟ್ರಾನಿಕ್ ಕಾರ್ಡ್ ಗಳು, ಸುಮಾರು 2 ಸಾವಿರ ರೂಪಾಯಿ ಮೌಲ್ಯದ 2 EB STEPLZER, ಸುಮಾರು 500 ರೂಪಾಯಿ ಮೌಲ್ಯದ DB PANEL ಬೋರ್ಡ್ ಹಾಗೂ ಇತರ ಬಿಡಿ ಭಾಗಗಳನ್ನು ಯಾರೋ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುವುದು ತಿಳಿದು ಬಂದಿರುತ್ತದೆ. ಕಳವಾದ ವಸ್ತುಗಳ ಒಟ್ಟು ಮೌಲ್ಯ 2,30,240/- ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment