ಬೆಂಗಳೂರು, ಅಕ್ಟೋಬರ್ 31, 2024 (ಕರಾವಳಿ ಟೈಮ್ಸ್) : ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಎಸ್.ಎಸ್.ಪಿ. ಪ್ರಿಮೆಟ್ರಿಕ್ (1 ರಿಂದ 8ನೇ ತರಗತಿವರೆಗೆ) ಹಾಗೂ ಪೆÇೀಸ್ಟ್ ಮೆಟ್ರಿಕ್ (ಪಿಯುಸಿಯಿಂದ ಮೇಲ್ಪಟ್ಟು ಎಲ್ಲಾ ಕೋರ್ಸ್ ಗಳಿಗೆ) ಶುಲ್ಕ ಮರುಪಾವತಿ ಸ್ಕಾಲರ್ ಶಿಪ್ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
ಅದೇ ರೀತಿ ಸಿಇಟಿ ಮೂಲಕ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಅರಿವು ಶೈಕ್ಷಣಿಕ ಸಾಲದ ನವೀಕರಣಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವನ್ನು ನವೆಂಬರ್ 15 ರವರೆಗೆ ವಿಸ್ತರಿಸಲಾಗಿದೆ. ಹಾಗೂ ವಿದೇಶಿ ವಿದ್ಯಾರ್ಥಿವೇತನ, ಪಿ.ಎಚ್.ಡಿ. ಫೆಲೋಶಿಪ್ ಹಾಗೂ ಐಐಟಿ, ಐಐಎಂ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಕೂಡಾ ನವೆಂಬರ್ 30 ರವರೆಗೆ ವಿಸ್ತರಿಸಿ ಅಲ್ಪಸಂಖ್ಯಾತ ಇಲಾಖೆ ಆದೇಶ ಹೊರಡಿಸಿದೆ. ಅರ್ಹ ಬಾಕಿ ಇರುವ ವಿದ್ಯಾರ್ಥಿಗಳು ಕೊನೆ ದಿನಾಂಕಕ್ಕೆ ಮುಂಚಿತವಾಗಿ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬಹುದು.
0 comments:
Post a Comment