ಬಂಟ್ವಾಳ, ನವೆಂಬರ್ 15, 2024 (ಕರಾವಳಿ ಟೈಮ್ಸ್) : ಕೊಳ್ನಾಡು ಗ್ರಾಮದ ಮಂಚಿಯಲ್ಲಿ ಆಯೋಜಿಸಲುದ್ದೇಶಿಸಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಪೂರ್ವಭಾವಿಯಾಗಿ ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾ ಸ್ಪರ್ಧೆ ಮತ್ತು ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ಪತ್ರ ಅನಾವರಣಗೊಳಿಸಿ ಮಾತನಾಡಿದ, ನಿವೃತ್ತ ಶಿಕ್ಷಕಿ ಹಾಗೂ ಬರಹಗಾರರಾದ ಶ್ರೀಮತಿ ಅನುಸೂಯ ರಾವ್ ಅವರು, ಬಂಟ್ವಾಳ ತಾಲೂಕಿನ ಅನುಭವಿ ಹಾಗೂ ಯುವ ಬರಹಗಾರರಿಗೆ ಇದೊಂದು ಉತ್ತಮ ವೇದಿಕೆ ಆಗಲಿದೆ. ಆಯೋಜನೆಯಾಗುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಇನ್ನಷ್ಟು ಹೊಸ ಪ್ರತಿಭೆಗಳು ಮೂಡಿಬರಲು ಸಾಧ್ಯವಿದೆ ಎಂದರು.
ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಮಾತನಾಡಿ, 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಪೂರ್ವಭಾವಿಯಾಗಿ ಆಯೋಜನೆಯಾಗಿರುವ ಈ ಸ್ಪರ್ಧೆಯು ಸ್ಮರಣ ಸಂಚಿಕೆ ಸಮಿತಿಯ ಮೊದಲ ಹೆಜ್ಜೆಯಾಗಿದೆ. ಈ ರೀತಿಯ ವೇಗ ಹಾಗೂ ಸೃಜನಾತ್ಮಕ ಪ್ರಯತ್ನಗಳು ಎಲ್ಲಾ ಸಮಿತಿಗಳಿಗೆ ಪ್ರೇರಣೆ ಹಾಗೂ ಸಮ್ಮೇಳನದ ಯಶಸ್ಸಿಗೆ ಕಾರಣವಾಗುತ್ತದೆ ಎಂದರು.
ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕ ಹಾಗೂ ಪ್ರಗತಿಪರ ಕೃಷಿಕ ನಿಶ್ಚಲ್ ಶೆಟ್ಟಿ, ಆರ್ಥಿಕ ಸಮಿತಿಯ ಸಹ ಸಂಚಾಲಕ, ಉದ್ಯಮಿ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಚಂದ್ರಹಾಸ ರೈ ಬಾಲಾಜಿಬೈಲು ಶುಭ ಹಾರೈಸಿದರು.
ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ಗಣೇಶ್ ಪ್ರಭು, ಕೋಶಾಧಿಕಾರಿ ಹಾಜಿ ಸುಲೈಮಾನ್ ಸುರಿಬೈಲು, ಮ್ಯಾಕ್ಸಿಮ್ ಫೆರ್ನಾಂಡಿಸ್, ವಿಜಯಾ ಬಿ ಶೆಟ್ಟಿ, ರಶ್ಮಿತಾ ಸುರೇಶ್, ವಿಜಯಲಕ್ಷ್ಮಿ ಕಟೀಲು, ಮಹಮ್ಮದ್ ಮನ್ಸೂರ್ ಕುಕ್ಕಾಜೆ ಭಾಗವಹಿಸಿದ್ದರು.
ಸ್ಮರಣ ಸಂಚಿಕೆ ಸಮಿತಿ ಸಂಚಾಲಕ ಹಮೀದ್ ಡಿ ಸ್ವಾಗತಿಸಿ, ಜಯ ಪ್ರಕಾಶ್ ರೈ ಮೇರಾವು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಎಂ ಡಿ ಮಂಚಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment