ಬಂಟ್ವಾಳ, ನವೆಂಬರ್ 04, 2024 (ಕರಾವಳಿ ಟೈಮ್ಸ್) : ಉಸ್ತಾದುಲ್ ಅಸಾತೀದ್ ಶೈಖುನಾ ಮಿತ್ತಬೈಲ್ ಉಸ್ತಾದ್ ಅವರ 6ನೇ ಉರೂಸ್ ಕಾರ್ಯಕ್ರಮಕ್ಕೆ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರೀ ಮುತ್ತುಕೋಯ ತಂಙಳ್ ಅವರು ಭಾನುವಾರ ಶೈಖುನಾ ಜಬ್ಬಾರ್ ಉಸ್ತಾದ್ ಅವರ ಮಖ್ ಬರ ಝಿಯಾರತ್ ಮಾಡುವ ಮೂಲಕ ಚಾಲನೆ ನೀಡಿದರು. ನವೆಂಬರ್ 4 ರ ಸೋಮವಾರ ಹಾಗೂ ನ 5 ರಂದು ಮಂಗಳವಾರ ಈ ಎರಡು ದಿನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉರೂಸ್ ನಡೆಯಲಿದೆ.
ನ 4 ರಂದು ಸೋಮವಾರ ಮಗ್ರಿಬ್ ನಮಾಝ್ ಬಳಿಕ ಮಜ್ಲಿಸ್ಸುನ್ನೂರ್ ಮಜ್ಲಿಸ್ ಹಾಗೂ ಸಂದಲ್ ಮೆರವಣಿಗೆ ನಡೆಯಲಿದ್ದು, ನ 5 ರಂದು ಮಂಗಳವಾರ ಸುಬ್ ಹಿ ನಮಾಝ್ ಬಳಿಕ ಶೈಖುನಾ ಮಿತ್ತಬೈಲು ಉಸ್ತಾದರ ಮಖ್ ಬರ ಬಳಿ ಖತಮುಲ್ ಕುರ್-ಆನ್ ಪಾರಾಯಣ, ಬೆಳಿಗ್ಗೆ 9 ಗಂಟೆಗೆ ಶೈಖುನಾ ಉಸ್ತಾದರ ಮನೆಯಲ್ಲಿ ಹಖೀಖತ್ ಮಾಲ ಹಾಗೂ ಜಝೀರತ್ ಮಾಲಾ ಆಲಾಪನೆ, ಲುಹ್ರ್ ನಮಾಝ್ ಬಳಿಕ ಮೌಲಿದ್ ಮಜ್ಲಿಸ್ ಹಾಗೂ ದುವಾಶಿರ್ವಚನ ನಡೆಯಲಿದೆ ಎಂದು ಶೈಖುನಾ ಉಸ್ತಾದರ ಸುಪುತ್ರ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ತಿಳಿಸಿದ್ದಾರೆ.
0 comments:
Post a Comment