ಗಣರಾಜ್ಯೋತ್ಸವ ಪ್ರಯುಕ್ತ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ : ಮೂಡಬಿದ್ರೆ ಅಲ್-ಫುರ್ಖಾನ್ ಶಾಲಾ ಹಾಫಿಳ್ ವಿದ್ಯಾರ್ಥಿನಿ ಶಾಮಿಯಾ ಮುಸ್ತಫಾಗೆ ದ್ವಿತೀಯ ಸ್ಥಾನ - Karavali Times ಗಣರಾಜ್ಯೋತ್ಸವ ಪ್ರಯುಕ್ತ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ : ಮೂಡಬಿದ್ರೆ ಅಲ್-ಫುರ್ಖಾನ್ ಶಾಲಾ ಹಾಫಿಳ್ ವಿದ್ಯಾರ್ಥಿನಿ ಶಾಮಿಯಾ ಮುಸ್ತಫಾಗೆ ದ್ವಿತೀಯ ಸ್ಥಾನ - Karavali Times

728x90

26 January 2025

ಗಣರಾಜ್ಯೋತ್ಸವ ಪ್ರಯುಕ್ತ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ : ಮೂಡಬಿದ್ರೆ ಅಲ್-ಫುರ್ಖಾನ್ ಶಾಲಾ ಹಾಫಿಳ್ ವಿದ್ಯಾರ್ಥಿನಿ ಶಾಮಿಯಾ ಮುಸ್ತಫಾಗೆ ದ್ವಿತೀಯ ಸ್ಥಾನ

ಮಂಗಳೂರು, ಜನವರಿ 26, 2024 (ಕರಾವಳಿ ಟೈಮ್ಸ್) : ಎಐಪಿಐಎಫ್ ಮೆಸೇಜ್ ಆಫ್ ಹ್ಯುಮಾನಿಟಿ ಫಾರಂ ಮಂಗಳೂರು ಘಟಕ ಗಣರಾಜ್ಯೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ “ಶಾಂತಿ ಹಾಗೂ ಸೌಹಾರ್ದತೆ : ನಮ್ಮ ಸಂವಿಧಾನ ರಕ್ಷಿಸುವ ಕೀಲಿ ಕೈ” ಎಂಬ ವಿಷಯದಲ್ಲಿನ ಪ್ರಬಂಧ ಸ್ಪರ್ಧೆ 2024-25 ರಲ್ಲಿ 5 ರಿಂದ 7ನೇ ತರಗತಿ ವಿಭಾಗದಲ್ಲಿ ಮೂಡಬಿದ್ರೆ ಅಲ್-ಫುರ್ಖಾನ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇಲ್ಲಿನ 5ನೇ ತರಗತಿಯ ಹಾಫಿಳ್ ವಿದ್ಯಾರ್ಥಿನಿ ಶಾಮಿಯಾ ಮುಸ್ತಫಾ ಅವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 

ಈಕೆ ನಂದಾವರ ನಿವಾಸಿ ಮುಖ್ತಾರ್ ಮುಸ್ತಫಾ ಹಾಗೂ ಮೆಹರುನ್ನಿಸಾ ದಂಪತಿಯ ಪುತ್ರಿಯಾಗಿದ್ದಾಳೆ. ಭಾನುವಾರ ಮಂಗಳೂರು-ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜಮೀಯ್ಯತುಲ್ ಫಲಾಹ್ ಮಂಗಳೂರು ತಾಲೂಕು ಘಟಕ, ಎಐಪಿಐಎಫ್ ಮೆಸೇಜ್ ಆಫ್ ಹ್ಯುಮಾನಿಟಿ ಫಾರಂ ಮಂಗಳೂರು ಘಟಕ, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಸರಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವುಗಳ ಸಂಯುಕ್ತ ಆಶÀ್ರಯದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರದ ಕಾರ್ಯಕ್ರಮದ ವೇದಿಕೆಯಲ್ಲಿ ಈಕೆಗೆ ನಗದು ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಚಿಂತಕ ಎಂ ಜಿ ಹೆಗಡೆ, ಕೆ ಕೆ ಶಾಹುಲ್ ಹಮೀದ್, ಡಿ ಎಂ ಅಸ್ಲಂ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಗಣರಾಜ್ಯೋತ್ಸವ ಪ್ರಯುಕ್ತ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ : ಮೂಡಬಿದ್ರೆ ಅಲ್-ಫುರ್ಖಾನ್ ಶಾಲಾ ಹಾಫಿಳ್ ವಿದ್ಯಾರ್ಥಿನಿ ಶಾಮಿಯಾ ಮುಸ್ತಫಾಗೆ ದ್ವಿತೀಯ ಸ್ಥಾನ Rating: 5 Reviewed By: karavali Times
Scroll to Top