ಬಂಟ್ವಾಳ, ಮಾರ್ಚ್ 20, 2025 (ಕರಾವಳಿ ಟೈಮ್ಸ್) : ಶ್ವಾಸಕೋಶದ ಕ್ಯಾನ್ಸರಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಕಸಬಾ ಗ್ರಾಮದ ಪಲ್ಲಿಕಂಡ ಎಂಬಲ್ಲಿ ಬುಧವಾರ ನಡೆದಿದೆ. ಮೃತ ವ್ಯಕ್ತಿಯನ್ನು ಇಲ್ಲಿನ ನಿವಾಸಿ ಶಿವಾನಂದ ಭಂಡಾರಿ (60) ಎಂದು ಹೆಸರಿಸಲಾಗಿದೆ.
ಇವರಿಗೆ ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮನೆಯಲ್ಲೇ ಆರೈಕೆ ಮಾಡುವಂತೆ ವೈದ್ಯರು ತಿಳಿಸಿದ ಪ್ರಕಾರ ಅವರ ಪತ್ನಿ ಪ್ರಪುಲ್ಲಾ ಭಂಡಾರ್ತಿ ಅವರು ಪತಿಯ ಆರೈಕೆ ಮಾಡಿಕೊಂಡಿದ್ದರು. ಅವರಿಗೆ ಕ್ಯಾನ್ಸರ್ ಇರುವ ಬಗ್ಗೆ ತಿಳಿದು ತಾನು ಹೆಚ್ಚಿನ ದಿನ ಬದುಕುವುದಿಲ್ಲ ಎಂದು ಕೊರಗುತ್ತಿದ್ದರು. ಈ ಮಧ್ಯೆ ಬುಧವಾರ ಬೆಳಿಗ್ಗೆ ಶಿವಾನಂದ ಭಂಡಾರಿಯವರು ಎದೆನೋವಿನಿಂದ ನರಳುತ್ತಾ ನನಗೆ ವಿಪರೀತ ಎದೆನೋವು ಆಗುತ್ತಿದೆ ನಾನು ಸಾಯುವುದಾಗಿ ಹೇಳುತ್ತಿದ್ದರು. ಈ ವೇಳೆ ಪತ್ನಿ ಅವರನ್ನು ಸಮಾಧಾನಪಡಿಸಿ, ಬಳಿಕ ತಾನು ಕಟ್ಟಿದ ಬೀಡಿ ಕೊಡುವ ಸಲುವಾಗಿ ಮನೆಯಿಂದ ಹೊರಟು ಜಕ್ರಿಬೆಟ್ಟು ಎಂಬಲ್ಲಿಗೆ ತೆರಳಿ ಬೀಡಿ ಕೊಟ್ಟು ವಾಪಾಸು ಮನೆಗೆ ಬರುವಷ್ಟರಲ್ಲಿ ಗಂಡ ಮನೆಯ ಕೋಣೆಯ ಅಡ್ಡಕ್ಕೆ ಸೀರೆಯನ್ನು ಕುಣಿಕೆಯನ್ನಾಗಿ ಮಾಡಿ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಪತ್ನಿ ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment