ಪುತ್ತೂರು, ಎಪ್ರಿಲ್ 30, 2025 (ಕರಾವಳಿ ಟೈಮ್ಸ್) : 2019 ರ ಫೆಬ್ರವರಿ 19 ರಂದು ಪುತ್ತೂರು ಕಾಯಿಮಣ ಗ್ರಾಮದ ಅಂಕಜಾಲು ಎಂಬಲ್ಲಿ, ಆರೋಪಿ ಗೋಪಾಲ @ ಗೋಪಾ ಎಂಬಾತನು ಕ್ಷುಲ್ಲಕ ಕಾರಣಕ್ಕೆ ತನ್ನ ತಾಯಿ ಚಿಂಕು ಎಂಬವರಿಗೆ ಹಲ್ಲೆ ನಡೆಸಿ, ಬಳಿಕ ಚಿಕಿತ್ಸೆ ಕೊಡಿಸದ ಪರಿಣಾಮ ಆಕೆಯು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆತನಿಗೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪಿತ್ತಿದೆ.
ಆರೋಪಿತನ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಕಲಂ 304 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಪ್ರಾರಂಭಿಕ ತನಿಖೆ ನಡೆಸಿದ ಬೆಳ್ಳಾರೆ ಠಾಣಾ ಪಿಎಸ್ಸೈ ಈರಯ್ಯ ಡಿ ಎನ್ ಅವರು, ತನಿಖೆ ಮುಂದುವರಿಸಿದ ಆಗಿನ ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ಸತೀಶ್ ಕುಮಾರ್ ಆರ್ ಅವರು ತನಿಖೆ ನಡೆಸಿ ಆರೋಪಿಯ ವಿರುದ್ಧ ಸೂಕ್ತ ಸಾಕ್ಷಿಗಳನ್ನು ಕಲೆಹಾಕಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸದ್ರಿ ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ಶ್ರೀಮತಿ ಜಯಂತಿ ಭಟ್ ಅವರು ವಿಚಾರಣೆ ನಡೆಸಿ ವಾದ ಮಂಡಿಸಿರುತ್ತಾರೆ. ಪ್ರಸ್ತುತ ಆರೋಪಿತನು ಕೃತ್ಯ ಎಸಗಿರುವುದು ಸಾಬೀತಾಗಿ, ಮಂಗಳೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ಸರಿತಾ ಡಿ ಅವರು ಆರೋಪಿತನಿಗೆ ಐದು ವರ್ಷ ಶಿಕ್ಷೆ ಮತ್ತು 5000 ದಂಡ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಮೂರು ತಿಂಗಳ ಸಾಧಾರಣ ಶಿಕ್ಷೆ ವಿಧಿಸಿ ಎಪ್ರಿಲ್ 29 ರಂದು ತೀರ್ಪು ನೀಡಿದ್ದಾರೆ.
0 comments:
Post a Comment