ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಳ ನಡುವೆ ಚಕಮಕಿ : ಓರ್ವಗೆ ಗಾಯ - Karavali Times ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಳ ನಡುವೆ ಚಕಮಕಿ : ಓರ್ವಗೆ ಗಾಯ - Karavali Times

728x90

19 May 2025

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಳ ನಡುವೆ ಚಕಮಕಿ : ಓರ್ವಗೆ ಗಾಯ

ಮಂಗಳೂರು, ಮೇ 19, 2025 (ಕರಾವಳಿ ಟೈಮ್ಸ್) : ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಸಂಜೆ ವಿಚಾರಣಾಧೀನ ಕೈದಿಗಳ ನಡುವೆ ವಾಗ್ವಾದ ನಡೆದಿದ್ದು, ಪರಿಣಾಮವಾಗಿ ಜೈಲಿನ ಕೆಲವೊಂದು ವಸ್ತುಗಳಿಗೆ ಹಾನಿಯುಂಟಾಗಿದೆ. ಜಟಾಪಟಿ ಸಂದರ್ಭ ಓರ್ವ ಕೈದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಜೈಲು ಅಧಿಕಾರಿಗಳು ಪೆÇಲೀಸ್ ದೂರು ದಾಖಲಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.

ಸೋಮವಾರ ಸಂಜೆ ಸುಮಾರು 6.40ರ ವೇಳೆಗೆ ಘಟನೆ ನಡೆದಿದೆ ಎನ್ನಲಾಗಿದೆ. ಜೈಲಿನ ಕ್ವಾರಂಟೈನ್ ಸೆಲ್ ವಿಭಾಗದಲ್ಲಿ ಕೆಲ ವಿಚಾರಣಾಧೀನ ಕೈದಿಗಳು ಕಚೇರಿ ಪ್ರದೇಶದ ಬಳಿ ನಿಂತು ಬಿ ಬ್ಯಾರಕ್‍ನಲ್ಲಿದ್ದ ಕೈದಿಗಳು ತಮ್ಮತ್ತ ನೋಡಿದರು ಎಂಬ ಕಾರಣಕ್ಕಾಗಿ ಪರಸ್ಪರ ಅವ್ಯಾಚ ಶಬ್ದಗಳೊಂದಿಗೆ ಬೈದಾಡಿಕೊಂಡು ಕೂಗಾಡಿದ್ದು, ಈ ಸಮಯದಲ್ಲಿ ಸಿಮೆಂಟ್ ಬ್ಲಾಕ್‍ನ್ನು ಹೊಡೆದು ಅದರ ತುಂಡುಗಳನ್ನು ಎಸೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಬಿ ಬ್ಯಾರಕ್‍ನ ಕೆಲವು ವಿಚಾರಣಾಧೀನ ಕೈದಿಗಳು ಒಳಗಿನ ಗೇಟನ್ನು ಬಲವಂತವಾಗಿ ತೆರೆದು ನ್ಯಾಯಾಂಗ ವಿಭಾಗದ ಕಚೇರಿಗೆ ಹೋಗಿ ತಮ್ಮ ಕೈಗಳಿಂದ ಬಾಗಿಲಿನ ಗಾಜಿನ ಫಲಕ ಒಡೆದು ಹಾನಿಯುಂಟು ಮಾಡಿದ್ದಾರೆ ಎನ್ನಲಾಗಿದೆ. 

ಘಟನೆಯಿಂದ ಓರ್ವ ವಿಚಾರಣಾಧೀನ ಕೈದಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಂಗಳೂರು ಜಿಲ್ಲಾ ಜಿಲ್ಲಾ ಸೂಪರಿಂಟೆಂಡೆಂಟ್ ಅವರು ಬರ್ಕೆ ಪೆÇಲೀಸ್ ರಾಣೆಯಲ್ಲಿ ದೂರು ದಾಖಲಿಸಿದ್ದು, ಗಲಭೆಯಲ್ಲಿ ಭಾಗಿಯಾಗಿರುವ ಕೈದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. ಜೈಲು ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮುಂದಕ್ಕೆ ಇಂತಹ ಘಟನೆಗಳು ಮರುಕಳಿಸದಂತೆ ಜೈಲು ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಳ ನಡುವೆ ಚಕಮಕಿ : ಓರ್ವಗೆ ಗಾಯ Rating: 5 Reviewed By: karavali Times
Scroll to Top