ಬಂಟ್ವಾಳ, ಮೇ 20, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ ಕಸಬ ಗ್ರಾಮದ 3ನೇ ವಾರ್ಡಿನ ಜಕ್ರಿಬೆಟ್ಟು ಸಮೀಪದ ಪಲ್ಲಿಕಂಡ ಎಂಬಲ್ಲಿ ಪುರಸಭೆಯ ಮಾಜಿ ಸದಸ್ಯ ದಿವಂಗತ ಬಾಝಿಲ್ ಪಿಂಟೋ ಅವರ ಮನೆ ಮಂಗಳವಾರ ಬೆಳಿಗ್ಗೆ ಸುರಿದ ಭಾರೀ ಮಳೆಗೆ ಕುಸಿದು ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಸದ್ಯ ಈ ಮನೆಯಲ್ಲಿ ದಿವಂತ ಬಾಝಿಲ್ ಪಿಂಟೋ ಅವರ ವಯೋವೃದ್ದೆ ತಾಯಿ ಸಿಸಿಲಿಯಾ ಪಿಂಟೊ ಸಹಿತ ಕುಟುಂಬ ವಾಸವಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ, ಮುಖ್ಯಾಧಿಕಾರಿ ನಝೀರ್ ಅಹ್ಮದ್, ಇಂಜಿನಿಯರ್ ಡೊಮೆನಿಕ್ ಡಿ ಮೆಲ್ಲೋ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.
0 comments:
Post a Comment