ಬಿ.ಸಿ.ರೋಡು : ಅಪಘಾತದ ಗಾಯಾಳು ನೋವು ಉಲ್ಬಣಗೊಂಡು ಆಸ್ಪತ್ರೆಗೆ ದಾಖಲು - Karavali Times ಬಿ.ಸಿ.ರೋಡು : ಅಪಘಾತದ ಗಾಯಾಳು ನೋವು ಉಲ್ಬಣಗೊಂಡು ಆಸ್ಪತ್ರೆಗೆ ದಾಖಲು - Karavali Times

728x90

3 May 2025

ಬಿ.ಸಿ.ರೋಡು : ಅಪಘಾತದ ಗಾಯಾಳು ನೋವು ಉಲ್ಬಣಗೊಂಡು ಆಸ್ಪತ್ರೆಗೆ ದಾಖಲು

ಬಂಟ್ವಾಳ, ಮೇ 03, 2025 (ಕರಾವಳಿ ಟೈಮ್ಸ್) : ಕಳೆದ ತಿಂಗಳು ಬಿ ಸಿ ರೋಡಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ವ್ಯಕ್ತಿ ಗಾಯ ಉಲ್ಬಣಗೊಂಡು ಮೇ 1 ರಂದು ಆಸ್ಪತ್ರೆಗೆ ದಾಖಲಾದ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಸ್ಪತ್ರೆಗೆ ದಾಖಲಾದ ಬೈಕ್ ಸವಾರ ಗಾಯಾಳುವನ್ನು ಪಡ್ನೂರು ಗ್ರಾಮದ ಬೇರಿಕೆ ನಿವಾಸಿ ಗಣೇಶ್ ಎಂದು ಹೆಸರಿಸಲಾಗಿದೆ. ಇವರು ಎಪ್ರಿಲ್ 5 ರಂದು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಬಿ ಸಿ ರೋಡು ಮುಖ್ಯ ವೃತ್ತದ ಬಳಿಯ ಸಲಫಿ ಮಸೀದಿ ಮುಂಭಾಗ ಹೆದ್ದಾರಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಈ ಸಂದರ್ಭ ಇವರನ್ನು ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಎಪ್ರಿಲ್ 10 ರಂದು ಗಾಯದ ನೋವು ಉಲ್ಬಣಿಸಿದ್ದರಿಂದ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಎಂ ಆರ್ ಐ ಸ್ಕ್ಯಾನಿಂಗ್ ಮಾಡಿಸಿ ಚಿಕಿತ್ಸೆ ಪಡೆದು ಮನೆಯಲ್ಲೇ ವಿಶ್ರಾಂತಿಯಲ್ಲಿದ್ದರು. ಆದರೆ ಮೇ 1 ರಂದು ಮತ್ತೆ ನೋವು ಉಲ್ಬಣಗೊಂಡ ಕಾರಣ ಪುತ್ತೂರು ಮಹಾವೀರ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅವರ ಸಂಬಂಧಿ ಧರ್ಮರಾಜ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಅಪಘಾತದ ಗಾಯಾಳು ನೋವು ಉಲ್ಬಣಗೊಂಡು ಆಸ್ಪತ್ರೆಗೆ ದಾಖಲು Rating: 5 Reviewed By: karavali Times
Scroll to Top