ಬಂಟ್ವಾಳ, ಮೇ 21, 2025 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕೆಲವೆಡೆ ಮಳೆ ಹಾನಿ ಪ್ರಕರಣಗಳು ವರದಿಯಾಗಿವೆ. ಮೇರಮಜಲು ಗ್ರಾಮದ ನಿವಾಸಿ ಚಂದ್ರಾವತಿ ಕೋಂ ಚಂದ್ರಹಾಸ ಅವರ ಮನೆಯ ಹಿಂಬದಿಯ ಬರೆ ಜರಿದು ಮನೆಯ ಗೋಡೆಗೆ ಹಾನಿಯಾಗಿದೆ.
ಪುದು ಗ್ರಾಮದ ಕರ್‍ಮಾರ್ ನಿವಾಸಿ ಸೆಫಿಯಾ ಕೋಂ ಶಮೀರ್ ಅವರ ಮನೆಗೆ ಮರ ಬಿದ್ದು ಮನೆ ಗೋಡೆ ಹಾಗೂ ಮಾಡಿನ ಹಂಚಿಗೆ ಹಾನಿಯಾಗಿದೆ.
0 comments:
Post a Comment