ಜಿಲ್ಲೆಯ ಟಾರ್ಗೆಟೆಡ್ ಕೊಲೆಗಳ ತನಿಖೆಗೆ ಸ್ಪೆಷಲ್ ಇನ್ವಿಸ್ಟಿಗೇಶನ್ ಟೀ (ಎಸ್.ಐ.ಟಿ.) ರಚಿಸಿ : ಅಂತಹ ಕೃತ್ಯಗಳ ಹಿಂದೆ ರಮಾನಾಥ ರೈ ಇದ್ದರೂ ಕಠಿಣ ಕ್ರಮ ಜರುಗಿಸಿ, ಮಾನವ ಹತ್ಯೆ ಕೃತ್ಯ ಅತ್ಯಂತ ಖಂಡನೀಯ : ಕುಡುಪು ಕೃತ್ಯದ ಬಗ್ಗೆ ರೈ ಕೆಂಡಾಮಂಡಲ - Karavali Times ಜಿಲ್ಲೆಯ ಟಾರ್ಗೆಟೆಡ್ ಕೊಲೆಗಳ ತನಿಖೆಗೆ ಸ್ಪೆಷಲ್ ಇನ್ವಿಸ್ಟಿಗೇಶನ್ ಟೀ (ಎಸ್.ಐ.ಟಿ.) ರಚಿಸಿ : ಅಂತಹ ಕೃತ್ಯಗಳ ಹಿಂದೆ ರಮಾನಾಥ ರೈ ಇದ್ದರೂ ಕಠಿಣ ಕ್ರಮ ಜರುಗಿಸಿ, ಮಾನವ ಹತ್ಯೆ ಕೃತ್ಯ ಅತ್ಯಂತ ಖಂಡನೀಯ : ಕುಡುಪು ಕೃತ್ಯದ ಬಗ್ಗೆ ರೈ ಕೆಂಡಾಮಂಡಲ - Karavali Times

728x90

1 May 2025

ಜಿಲ್ಲೆಯ ಟಾರ್ಗೆಟೆಡ್ ಕೊಲೆಗಳ ತನಿಖೆಗೆ ಸ್ಪೆಷಲ್ ಇನ್ವಿಸ್ಟಿಗೇಶನ್ ಟೀ (ಎಸ್.ಐ.ಟಿ.) ರಚಿಸಿ : ಅಂತಹ ಕೃತ್ಯಗಳ ಹಿಂದೆ ರಮಾನಾಥ ರೈ ಇದ್ದರೂ ಕಠಿಣ ಕ್ರಮ ಜರುಗಿಸಿ, ಮಾನವ ಹತ್ಯೆ ಕೃತ್ಯ ಅತ್ಯಂತ ಖಂಡನೀಯ : ಕುಡುಪು ಕೃತ್ಯದ ಬಗ್ಗೆ ರೈ ಕೆಂಡಾಮಂಡಲ

ಮಂಗಳೂರು, ಮೇ 01, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವೈಷಮ್ಯಕ್ಕಿಂತಲೂ ಮುಖ್ಯವಾಗಿ ಟಾರ್ಗೆಟೆಡ್ ಕೊಲೆಗಳು ನಡೆಯುತ್ತಿದ್ದು, ಈ ಬಗ್ಗೆ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಂ ರಚಿಸಿ ಸಮಗ್ರ ತನಿಖೆ ನಡೆಸುವ ಮೂಲಕ ಅದರ ಹಿಂದಿರುವ ನಿಗೂಢತೆಗಳನ್ನು ಬೇಧಿಸಬೇಕು ಹಾಗೂ ತಪ್ಪಿತಸ್ಥರು ಯಾರಿದ್ದರೂ ತಕ್ಕ ಶಾಸ್ತಿ ಮಾಡುವ ಮೂಲಕ ಇಲ್ಲಿನ ಮಾನವ ಹತ್ಯೆಯಂತಹ ಘಟನೆಗಳಿಗೆ ಫುಲ್ ಸ್ಟಾಪ್ ಹಾಕಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು. 

ಮಂಗಳೂರು ಹೊರವಲಯದ ಕುಡುಪುವಿನಲ್ಲಿ ಭಾನುವಾರ ಸಂಜೆ ನಡೆದ ಕೇರಳ ನಿವಾಸಿ ಅಶ್ರಫ್ ಎಂಬಾತನನ್ನು ಗುಂಪು ಹತ್ಯೆ ನಡೆಸಿದ ಬಗ್ಗೆ ಗುರುವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಇಂತಹ ನಗರಗಳಿಗೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವ ಸಂದರ್ಭ ಸರಕಾರ ಬಹಳಷ್ಟು ಜಾಗರೂಕತೆ ವಹಿಸಬೇಕು. ದಕ್ಷ ಹಾಗೂ ನಿಷ್ಠುರ ಅಧಿಕಾರಿಗಳನ್ನು ನೇಮಿಸುವ ಮೂಲಕ ಇಲ್ಲಿನ ಕೋಮು ಹಾಗೂ ಟಾರ್ಗೆಟೆಡ್ ಮರ್ಡರ್ ಗಳಿಗೆ ಬ್ರೇಕ್ ಹಾಕಬಹುದು ಎನ್ನುವ ಮೂಲಕ ಜಿಲ್ಲೆಯ ಅಧಿಕಾರಿಗಳ ಪಕ್ಷಪಾತೀಯ ಕ್ರಮವೆ ಇಲ್ಲಿನ ಎಲ್ಲ ಕೋಮು ಸಂಬಂಧಿ ಘಟನೆಗಳಿಗೆ ಕಾರಣವಾಗಿದ್ದು, ಜಿಲ್ಲೆಯ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಮೇಜರಿ ಸರ್ಜರಿ ಅಗತ್ಯವಿದೆ ಎಂಬರ್ಥದಲ್ಲಿ ವಿವರಿಸಿದರು. 

ಕೋಮು ಗಲಭೆಗಳು ಸಾಮಾನ್ಯವಾಗಿ ಕ್ಲುಲ್ಲಕ ಕಾರಣಗಳಿಗೂ ನಡೆಯುತ್ತೆ. ಆದರೆ ಅದು ತಕ್ಷಣ ನಿಯಂತ್ರಣಕ್ಕೆ ಬಂದು ಮತ್ತೆ ಶಾಂತಿ ಸುವ್ಯವಸ್ಥೆ ನೆಲೆಸುತ್ತದೆ. ಆದರೆ ನಮ್ಮ ಜಿಲ್ಲೆಯಲ್ಲಿ ನಡೆಯುವುದು ಕೋಮು ಸಂಘರ್ಷಗಳಾಗಿರದೆ ಪ್ರತೀಕಾರದ ಹತ್ಯೆಗಳಾಗಿದ್ದು, ಇದು ಸಂಪೂರ್ಣ ನಿಯಂತ್ರಣಕ್ಕೆ ಬರಲು ನಿಷ್ಠಾವಂತ ಅಧಿಕಾರಿಗಳನ್ನೊಳಗೊಂಡ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಂ (ಎಸ್ ಐ ಟಿ) ರಚನೆ ಮಾಡಬೇಕು. ಆ ಮೂಲಕ ಈ ಹಿಂದೆ ನಡೆದ ಎಲ್ಲ ಕೊಲೆ ಪ್ರಕರಣಗಳ ಸಮಗ್ರ ತನಿಖೆ ನಡೆಸಬೇಕು. ಅದರ ಹಿಂದಿನ ನಿಗೂಢತೆಯನ್ನು ಬೇಧಿಸಬೇಕು. ಇದರ ಹಿಂದೆ ರಮಾನಾಥ ರೈ ಇದ್ದರೂ ಇನ್ನೊಬ್ಬರಿದ್ದರೂ ಕಠಿಣ ಕ್ರಮ ಜರುಗಿಸಬೇಕು ಎಂದು ಗುಡುಗಿದ ರಮಾನಾಥ ರೈ ಅವರು ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಗ್ರವಾಗಿ ವಿವರಿಸುವ ಉದ್ದೇಶದಿಂದ ಕಾಂಗ್ರೆಸ್ ನಾಯಕರ ನಿಯೋಗ ಕಟ್ಟಿಕೊಂಡು ಸಿಎಂ ಭೇಟಿ ಮಾಡುವ ಅಪೇಕ್ಷೆ ಇದೆ ಎಂದರು. 

ಮಾನವ ಹತ್ಯೆಯಂತಹ ಘೋರ ಕೃತ್ಯಗಳನ್ನು ಎಸಗಲು ಪ್ರೇರೇಪಿಸುವ ಮಾನಸಿಕ ಸ್ಥಿತಿ ಬದಲಾಗಬೇಕು. ಮಂಗಳೂರಿನಲ್ಲಿ ನಡೆದಿರುವ ಘೋರ ಘಟನೆಯಿಂದ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಇಲ್ಲಿ ವ್ಯಕ್ತಿಯ ಧರ್ಮ ಅಥವಾ ಜಾತಿ ಮುಖ್ಯವಲ್ಲ. ಆದರೆ ಒಬ್ಬ ಮನುಷ್ಯನನ್ನು ಹೊಡೆದು ಹತ್ಯೆ ಮಾಡಲಾಗಿದೆ. ಇದು ಖಂಡನೀಯ ಎಂದ ರೈ, ಮೃತ ವ್ಯಕ್ತಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಪ್ರಕರಣದ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಇಂತಹ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಏನಾದರೂ ಮಾನವ ಹತ್ಯೆಯಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಜಿಲ್ಲೆಯ ಟಾರ್ಗೆಟೆಡ್ ಕೊಲೆಗಳ ತನಿಖೆಗೆ ಸ್ಪೆಷಲ್ ಇನ್ವಿಸ್ಟಿಗೇಶನ್ ಟೀ (ಎಸ್.ಐ.ಟಿ.) ರಚಿಸಿ : ಅಂತಹ ಕೃತ್ಯಗಳ ಹಿಂದೆ ರಮಾನಾಥ ರೈ ಇದ್ದರೂ ಕಠಿಣ ಕ್ರಮ ಜರುಗಿಸಿ, ಮಾನವ ಹತ್ಯೆ ಕೃತ್ಯ ಅತ್ಯಂತ ಖಂಡನೀಯ : ಕುಡುಪು ಕೃತ್ಯದ ಬಗ್ಗೆ ರೈ ಕೆಂಡಾಮಂಡಲ Rating: 5 Reviewed By: karavali Times
Scroll to Top