ಬಂಟ್ವಾಳ, ಜುಲೈ 30, 2025 (ಕರಾವಳಿ ಟೈಮ್ಸ್) : ಮನೆಯಿಂದ ಸ್ಕೂಟರಿನಲ್ಲಿ ಹೋದ ಯುವಕ ವಾಪಾಸು ಬಾರದೆ ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವಕನನ್ನು ಹೇಮಂತ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ತಾಯಿ ಭಾರತಿ (57) ಅವರು ಠಾಣೆಗೆ ದೂರು ನೀಡಿದ್ದು, ಮಗ ಹೇಮಂತ್ ಸುಮಾರು 6 ತಿಂಗಳಿಂದ ಸಂತೋಷ್ ಎಂಬವರೊಂದಿಗೆ ಅಕ್ವ ಗಾರ್ಡ್ ಕಂಪೆನಿಯಲ್ಲಿ ಸರ್ವಿಸಿಂಗ್ ಕೆಲಸ ಮಾಡಿಕೊಂಡಿದ್ದು, ಕಳೆದ 2 ತಿಂಗಳಿನಿಂದ ಯಾವುದೋ ವಿಷಯದಲ್ಲಿ ಬೇಸರ ಮಾಡಿಕೊಂಡು ಯಾರೊಂದಿಗೂ ಸೇರದೇ ಮನೆಯಲ್ಲಿ ಒಬ್ಬನೆ ಇರುತ್ತಿದ್ದವನು ಜುಲೈ 28 ರಂದು ರಂದು ಬೆಳಿಗ್ಗೆ 9 ಗಂಟೆಗೆ ಆತನ ಸ್ಕೂಟರಿನಲ್ಲಿ ಮನೆಯಿಂದ ಹೋದವನು ಸಂಜೆಯಾದರೂ ಮನೆಗೆ ಬಾರದೇ ಇದ್ದು ಸಂಬಂಧಿಕರಲ್ಲಿ ನೆರೆಕೆರೆಯವರಲ್ಲಿ ವಿಚಾರಿಸಿದಾಗ ಪತ್ತೆಯಾಗಿಲ್ಲ ಎಂದು ನೀಡಿರುವ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment