ಕಡಬ, ಜುಲೈ 17, 2025 (ಕರಾವಳಿ ಟೈಮ್ಸ್) : ಸಹೋದರರ ನಡುವಿನ ಜಗಳದಲ್ಲಿ ಕತ್ತಿಯೇಟು ನಡೆದು ಓರ್ವ ಸಹೋದರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಸಹೋದರನ ಕತ್ತಿ ಏಟಿನಿಮಧ ಗಾಯಗೊಂಡವರನ್ನು ರಾಜಶೇಖರ (37) ಎಂದು ಹೆಸರಿಸಲಾಗಿದೆ. ಇವರು ಬುಧವಾರ ರಾತ್ರಿ ಮನೆಯಲ್ಲಿದ್ದಾಗ ಸ್ಥಳಕ್ಕೆ ಬಂದ ಆರೋಪಿ ಸಹೋದರ ಮನೋಜ್ ಕುಮಾರ್ ಎಂಬಾತ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಈ ವೇಳೆ ಅವರಿಬ್ಬರ ನಡುವೆ ಜಗಳವಾಗಿದೆ. ಅದೇ ವೇಳೆ ಮತ್ತೋರ್ವ ಸಹೋದರ ಜಯರಾಜ್ ಎಂಬಾತ ಕತ್ತಿಯಿಂದ ರಾಜಶೇಖರ್ ಅವರಿಗೆ ಹಲ್ಲೆ ನಡೆಸಿದ್ದಾನೆ. ಕತ್ತಿಯೇಟಿನಿಂದ ಗಾಯಗೊಂಡ ರಾಜಶೇಖರ್ ಅವರನ್ನು ಇನ್ನೋರ್ವ ಸಹೋದರ ಬಾಲಕೃಷ್ಣ ಎಂಬಾತ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2025 ಕಲಂ 352, 118(1) ಜೊತೆಗೆ 3(5) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment