ಬಂಟ್ವಾಳ, ಜುಲೈ 02, 2025 (ಕರಾವಳಿ ಟೈಮ್ಸ್) : ಕೇರಳದಿಂದ ಪರವಾನಿಗೆ ಹೊಂದಿ ಲ್ಯಾಟ್ರರೇಟ್ ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ಗುಂಪೊಂದು ತಡೆದು ನಿಲ್ಲಿಸಿ ಅಡ್ಡಿಪಡಿಸಿದ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಈ ಬಗ್ಗೆ ಲಾರಿ ಚಾಲಕರು ನೀಡಿದ ದೂರಿನಂತೆ 8 ಮಂದಿ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ನೆಹರೂನಗರ ನಿವಾಸಿ ಸುಹೇಬ್ (38) ಹಾಗೂ ಉಮೇಶ ಯಾನೆ ಹರ್ಷ ಎಂಬವರು ಸೋಮವಾರ ಕೇರಳದ ನೆಕ್ರಾಜೆ ಎಂಬಲ್ಲಿರುವ ಕೋರೆಯಿಂದ ನೋಂದಣಿ ಸಂಖ್ಯೆ ಕೆಎ-32-ಬಿ-2256 ಹಾಗೂ ಕೆಎ-21-ಬಿ-2471ನೇ ಲಾರಿಗಳಲ್ಲಿ ಲ್ಯಾಟರೇಟ್ ಕಲ್ಲುಗಳನ್ನು ಲೋಡ್ ಮಾಡಿಕೊಂಡು ಲ್ಯಾಟರೇಟ್ ಕಲ್ಲು ಸಾಗಾಟಕ್ಕೆ ಬೇಕಾದ ಪರ್ಮಿಟ್ ಪಡೆದುಕೊಂಡು ಪುತ್ತೂರು ಕಡೆಗೆ ಹೋಗುತ್ತಿರುವಾಗ ರಾತ್ರಿ 9.30 ರ ವೇಳೆಗೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿಗೆ ತಲುಪಿದಾಗ ಕೆಲವು ಮಂದಿ ವ್ಯಕ್ತಿಗಳು ರಸ್ತೆಯಲ್ಲಿ ಅಕ್ರಮ ಕೂಟ ಸೇರಿಕೊಂಡು ರಸ್ತೆಗೆ ಅಡ್ಡ ನಿಂತು ಲಾರಿಗಳನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಲ್ಯಾಟರೇಟ್ ಕಲ್ಲು ಸಾಗಾಟದ ಬಗ್ಗೆ ಪರ್ಮಿಟ್ ಕೇಳಿದ್ದಾರೆ. ಈ ಸಂದರ್ಭ ಲಾರಿ ಚಾಲಕರು ಕಲ್ಲು ಸಾಗಟದ ಬಗ್ಗೆಯಿರುವ ಪರ್ಮಿಟ್ ತೋರಿಸಿದ್ದಾರೆ. ಆದರೂ ಸ್ಥಳದಲ್ಲಿದ್ದ ತಂಡ ಕೇರಳ ರಾಜ್ಯದಿಂದ ಕಲ್ಲು ಸಾಗಾಟ ಮಾಡುತ್ತಿರಾ, ನಿಮ್ಮನ್ನು ಈ ರಸ್ತೆಯಲ್ಲಿ ಕಲ್ಲು ಸಾಗಾಟ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಸಂದರ್ಭ ಲಾರಿ ಚಾಲಕರು ಕಲ್ಲು ಸಾಗಾಟದ ಬಗ್ಗೆ ನಮ್ಮಲ್ಲಿ ಸರಿಯಾದ ಪರ್ಮಿಟ್ ಇದೆ ನಮ್ಮನ್ನು ಮುಂದೆ ಹೋಗಲು ಬಿಡಿ ಎಂದು ಹೇಳಿದಾಗ ಆರೋಪಿಗಳು ನೀವು ಕೇರಳದಿಂದ ಕಲ್ಲು ಸಾಗಾಟ ಮಾಡುವುದು ಬೇಡ, ಕರ್ನಾಟಕದಲ್ಲಿ ಕಲ್ಲಿನ ಕೋರೆಗಳು ಬಂದ್ ಆಗಿದೆ, ಲಾರಿಗಳನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋದರೆ ನಾವು ಮುಂದೆ ಬಂದು ಪುನಃ ಲಾರಿಗಳನ್ನು ಅಡ್ಡ ಹಾಕುತ್ತೇವೆ, ನಿಮ್ಮನ್ನು ಎಲ್ಲಿಗೂ ಹೋಗಲು ಬಿಡುವುದಿಲ್ಲ, ಲಾರಿಗಳು ಇಲ್ಲೇ ಇರಬೇಕು ಎಂದು ಹೇಳಿ ಆರೋಪಿಗಳು ಅಲ್ಲಿಂದ ಹೊರಟು ಹೋಗಿದ್ದಾರೆ.
ಲಾರಿ ಚಾಲಕರು ತಮ್ಮ ಲಾರಿಗಳನ್ನು ಉಕ್ಕುಡದಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ ವರೆಗೆ ಚಲಾಯಿಸಿಕೊಂಡು ಬಂದು ಹೆದರಿಕೆಯಿಂದ ಮುಂದಕ್ಕೆ ಚಲಾಯಿಸದೇ ಅಲ್ಲೇ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು, ಬಳಿಕ ಅಲ್ಲಿ ಅಕ್ರಮ ಕೂಟ ಸೇರಿದ್ದ ವ್ಯಕ್ತಿಗಳು ಅವರೊಳಗೆ ಅವರ ಹೆಸರುಗಳನ್ನು ಜಯಪ್ರಕಾಶ್, ರಮೇಶ, ಸುಧೀರ್ ಕೋಟ್ಯಾನ್, ವರುಣ್ ರೈ, ಪ್ರಶಾಂತ್, ನಾಗೇಶ್, ಸುಂದರ ಎಂಬುದಾಗಿ ಹೇಳುತ್ತಿರುವುದನ್ನು ಕೇಳಿಕೊಂಡು ಲಾರಿ ಚಾಲಕರು ಆರೋಪಿಗಳ ಹೆಸರು ಪೊಲೀಸರಿಗೆ ತಿಳಿಸಿದ ಮೇರೆಗೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment