ಬಂಟ್ವಾಳ, ಜುಲೈ 01, 2025 (ಕರಾವಳಿ ಟೈಮ್ಸ್) : ಇಲ್ಲಿನ ವಿದ್ಯಾಗಿರಿಯ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸ್ತುತ 2025-26ನೇ ಶೈಕ್ಷಣಿಕ ವರ್ಷದಲ್ಲಿ ಆರ್ಮಿ ವಿಂಗ್ (ಜೆಡಿ/ ಜೆಡ್ಲ್ಯೂ) ಎನ್ ಸಿ ಸಿ ಘಟಕ ಪ್ರಾರಂಭಿಸಲು ಎನ್ ಸಿ ಸಿ ಮಂಗಳೂರು ಗ್ರೂಪಿನ 18 ಕರ್ನಾಟಕ ಬೆಟಾಲಿಯನ್ ಅನುಮತಿ ನೀಡಿದೆ.
ಬಂಟ್ವಾಳ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘದ ಅಧೀನದಲ್ಲಿ ಇಲ್ಲಿನ ವಿದ್ಯಾಗಿರಿಯಲ್ಲಿ ಕಾರ್ಯಾಚರಿಸುತ್ತಿರುವ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆ 1979ರಲ್ಲಿ ಶಿಕ್ಷಣ ಇಲಾಖೆಯಿಂದ ಆಂಗ್ಲ ಮಾಧ್ಯಮ ಬೋಧನೆಗೆ ಅನುಮತಿ ದೊರೆತ ಬಂಟ್ವಾಳ ತಾಲೂಕಿನ ಏಕೈಕ ಶಾಲೆಯಾಗಿದೆ.
ಬಂಟ್ವಾಳದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಪ್ರಾರಂಭವಾದ ಮೊತ್ತ ಮೊದಲ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಬಂಟ್ವಾಳ ತಾಲೂಕಿನಲ್ಲಿ ಪ್ರಥಮವಾಗಿ ಆರ್ಮಿ ವಿಂಗ್ (ಜೆಡಿ/ ಜೆಡ್ಲ್ಯೂ) ಎನ್ ಸಿ ಸಿ ಘಟಕ ಆರಂಭಿಸಲು ಅನುಮತಿ ದೊರೆತಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
0 comments:
Post a Comment