ಬಂಟ್ವಾಳ, ಜುಲೈ 14, 2025 (ಕರಾವಳಿ ಟೈಮ್ಸ್) : ಓಮ್ನಿ ಹಾಗೂ ಸ್ವಿಫ್ಟ್ ಕಾರುಗಳ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಆಮ್ನಿ ಕಾರು ಚಾಲಕ ಹಾಗೂ ಅವರ ಪತ್ನಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಚಿ ಗ್ರಾಮದ ನಿರ್ಬೈಲ್ ಕೋಳಿ ಫಾರಂ ಬಳಿ ಜುಲೈ 12 ರಂದು ಮಧ್ಯಾಹ್ನ ವೇಳೆ ನಡೆದಿದೆ.
ಗಾಯಗೊಂಡವರನ್ನು ಓಮ್ನಿ ಚಾಲಕ ಮಂಚಿ ನಿವಾಸಿ ಮಹಮ್ಮದ್ ಎನ್ (32) ಹಾಗೂ ಅವರ ಪತ್ನಿ ಸಫ್ರೀನಾ ಎಂದು ಹೆಸರಿಸಲಾಗಿದೆ. ಮಹಮ್ಮದ್ ಅವರು ಶನಿವಾರ ಮಧ್ಯಾಹ್ನ ತನ್ನ ಓಮ್ನಿ ಕಾರಿನಲ್ಲಿ ಪತ್ನಿ ಸಫ್ರಿನಾ ಹಾಗೂ ತಾಯಿ ನೆಬಿಸಾ ಅವರನ್ನು ಸಹಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಅಮ್ಟೂರು-ಉದ್ದೊಟ್ಟು ರಸ್ತೆಯಲ್ಲಿ ಉದ್ದೊಟ್ಟು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಮಂಚಿ ಗ್ರಾಮದ ನಿರ್ಬೈಲ್ ಕೋಳಿ ಫಾರಂ ಬಳಿ ಎದುರುಗಡೆಯಿಂದ ಅಬ್ದುಲ್ ಆಸೀಫ್ ಎಂಬವರು ಚಲಾಯಿಸಿಕೊಂಡು ಬಂದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಓಮ್ನಿ ಚಾಲಕ ಮಹಮ್ಮದ್ ಹಾಗೂ ಅವರ ಪತ್ನಿ ಸಫ್ರಿನಾ ಅವರಿಗೆ ಗಾಯಗಳಾಗಿದ್ದು, ಅವರನ್ನು ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಓಮ್ನಿ ಹಾಗೂ ಸ್ವಿಫ್ಟ್ ಕಾರುಗಳೆರಡೂ ಜಖಂಗೊಂಡಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment