ಬಂಟ್ವಾಳ, ಜುಲೈ 24, 2025 (ಕರಾವಳಿ ಟೈಮ್ಸ್) : ಇಲ್ಲಿನ ತುಳುಕೂಟದ ಆಶ್ರಯದಲ್ಲಿ, ಬಿ ಸಿ ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ಸಾರ್ವಜನಿಕ ಪಾಲೆದ ಕೆತ್ತೆ ಕಷಾಯ ವಿತರಣೆಯು ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು.
ದೇವಳದ ಪ್ರಧಾನ ಅರ್ಚಕ ರಘುಪತಿ ಭಟ್ ಪೂಜೆ ನೆರವೇರಿಸಿದ ನಂತರ ಕಷಾಯ ವಿತರಣೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್, ಕಾರ್ಯದರ್ಶಿ ಎಚ್ಕೆ ನಯನಾಡು, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಿ ವಿಶ್ವನಾಥ್, ಕೆ ಸೀತಾರಾಮ್ ಶೆಟ್ಟಿ, ಓ ಶಿವಶಂಕರ್, ಸುಭಾಶ್ಚಂದ್ರ ಜೈನ್, ರಾಜೇಶ್ ಐ ನಾಯಕ್, ಸೇಸಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ, ನಾರಾಯಣ ಸಿ ಪೆರ್ನೆ, ದೇವಪ್ಪ ಕುಲಾಲ್ ಪಂಜಿಕಲ್ಲು, ಪದ್ಮನಾಭ ರೈ, ಸತೀಶ್ ಕುಮಾರ್ ಕಾರ್ತಿಕ್, ಪರಮೇಶ್ವರ ಮೂಲ್ಯ, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ದಾಮೋದರ್ ಮಾಸ್ಟರ್ ಏರ್ಯ, ಸ್ವಜೇಶ್ ಜೈನ್, ಸನ್ಮತಿ ಜೆ ಜೈನ್ ಮೊದಲಾದವರು ಭಾಗವಹಿಸಿದ್ದರು. ಈ ವೇಳೆ ಸುಮಾರು 500ಕ್ಕಿಂತಲೂ ಅಧಿಕ ಮಂದಿ ಹಾಳೆ ಮದ್ದು ಸ್ವೀಕರಿಸಿದರು.
0 comments:
Post a Comment