ಬಂಟ್ವಾಳ, ಜುಲೈ 26, 2025 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಎಲಿಯನಡುಗೋಡು ಗ್ರಾಮದ ನಿವಾಸಿ ಶಾಂತ ಕೋಂ ಧರ್ಣಪ್ಪ ಪೂಜಾರಿ ಅವರ ವಾಸದ ಮನೆಗೆ ಅಡಿಕೆ ಮರ ಬಿದ್ದು ಬಾಗಶಃ ಹಾನಿಯಾಗಿದೆ. ಕೇಪು ಗ್ರಾಮದ ಕಲ್ಲಂಗಳ ಎಂಬಲ್ಲಿ ರಾಜ್ಯ ಹೆದ್ದಾರಿ ಬದಿಯ 2 ಭಾರಿ ಗಾತ್ರದ ಮರಗಳು ಉರುಳಿ ಬಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿರುತ್ತದೆ. ಪೆÇಲೀಸ್ ಇಲಾಖೆ, ಅರಣ್ಯ, ಕಂದಾಯ ಇಲಾಖೆ, ಮೆಸ್ಕಾಂ, ಗ್ರಾ ಪಂ ಸಿಬ್ಬಂದಿಗಳು ಸ್ಥಳದಲ್ಲಿದ್ದು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ವ್ಯಾಗನರ್ ಕಾರೊಂದು ಮರದಡಿ ಸಿಲುಕಿ ಹಾನಿಗೊಂಡಿದ್ದು, ಪ್ರಯಾಣಿಕರು ಸುರಕ್ಷಿತವಾಗಿ ಅಪಾಯದಿಂದ ಪಾರಾಗಿದ್ದಾರೆ. ವಿಟ್ಲ ಕಸಬಾ ಗ್ರಾಮದ ದೇವಸ್ಯ ನಿವಾಸಿ ಸರಸ್ವತಿ ಕೋಂ ನಾರಾಯಣ ರೈ ಅವರು ಬಾಡಿಗೆಗೆ ನೀಡಿರುವ ಮನೆಗೆ ಮಾವಿನ ಮರ ಬಿದ್ದು ಹಾನಿ ಸಂಭವಿಸಿದೆ. ಮನೆ ಮಂದಿಯನ್ನು ಸಂಬಂಧಿಕರ ಮನೆಗೆ ತೆರಳುವಂತೆ ಸೂಚಿಸಲಾಗಿದೆ.
ಕೇಪು ಗ್ರಾಮದ ಕುಕ್ಕೆಬೆಟ್ಟು ನಿವಾಸಿ ಸುಶೀಲ ಕೋಂ ಕಾಂತು ಅಜಿಲ ಅವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ಪುಣಚ ಗ್ರಾಮದ ಪರಿಯಾಲ್ತಡ್ಕ ನಿವಾಸಿ ರಮೇಶ್ ನಾಯ್ಕ ಅವರ ಮನೆಗೆ ಮರಬಿದ್ದು ಹಾನಿಯಾಗಿದೆ. ನರಿಕೊಂಬು ಗ್ರಾಮದ ಕೊಡಂಗೆಕೋಡಿ ನಿವಾಸಿ ಲೀಲಾವತಿ ಕೋಂ ಗಂಗಯ್ಯ ಪೂಜಾರಿ ಅವರ ದನದ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ. ಕೊಟ್ಟಿಗೆಯಲ್ಲಿದ್ದ ದನಗಳಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ಪಿಲಿಮೊಗರು ಗ್ರಾಮದ ಜತನಕೆರೆ ನಿವಾಸಿ ಶಾರದಾ ಕೋಂ ಮೋನಪ್ಪ ನಾಯ್ಕ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಬಾಗಶಃ ಹಾನಿಯಾಗಿದೆ.
ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆ ನಿವಾಸಿ ಅಬ್ದುಲ್ ರಜಾಕ್ ಅವರ ಮನೆ ಬಳಿ ಆವರಣ ಗೋಡೆ ಕುಸಿದುಬಿದ್ದಿದೆ. ಕನ್ಯಾನ ಗ್ರಾಮದ ಪಿಲಿಚಾಮುಂಡಿ ಗುಡ್ಡೆ ನಿವಾಸಿ ಕೃಷ್ಣ ನಾಯ್ಕ ಬಿನ್ ಸುಬ್ಬ ನಾಯ್ಕ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ನರಿಕೊಂಬು ಗ್ರಾಮದ ನೆಹರುನಗರ ನಿವಾಸಿ ಖತೀಜಮ್ಮ ಕೋಂ ಹಸನಬ್ಬ ಅವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಅಜೀಜ್ ಬಿನ್ ಕುಂಞಮೋನು ಅವರ ವಾಸ್ತವ್ಯದ ಮನೆಗೆ ಹಾನಿಯಾಗಿದೆ. ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಶಿವಪ್ರಸಾದ್ ಬಿನ್ ಕೃಷ್ಣ ನಾಯ್ಕ ಅವರ ಮನೆ ಮುಂಭಾಗ ತಡೆಗೋಡೆ ಕುಸಿದು ಹಾನಿಯಾಗಿದೆ. ವಾಸ್ತವ್ಯದ ಮನೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಎಲಿಯನಡುಗೋಡು ಗ್ರಾಮದ ನಿವಾಸಿ ಶಾಂತ ಕೋಂ ಧರ್ಣಪ್ಪ ಪೂಜಾರಿ ಅವರ ವಾಸದ ಮನೆಗೆ ಅಡಿಕೆ ಮರ ಬಿದ್ದು ಬಾಗಶಃ ಹಾನಿಯಾಗಿದೆ. ಕನ್ಯಾನ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಕನ್ಯಾನ-ಬಾಯಾರು ಪಿಡಬ್ಲ್ಯುಡಿ ರಸ್ತೆಗೆ ಬಿದ್ದ ಮರವನ್ನು ಸ್ಥಳೀಯರ ಸಹಕಾರದಿಂದ ತೆರವು ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ. ಬಿ ಮೂಡ ಗ್ರಾಮದ ತಲಪಾಡಿ ನಿವಾಸಿ ಅಬ್ದುಲ್ ಹಮೀದ್ ಅವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ. ಮಾಣಿಲ ಗ್ರಾಮದ ಸೊರಂಪಳ್ಳ ಅಂಗನವಾಡಿ ಬಳಿ ವಿದ್ಯುತ್ ಕಂಬದ ಮೇಲೆ ಮರಬಿದ್ದು ಅಂಗನವಾಡಿಯ ಮೇಲ್ಛಾವಣಿಗೆ ಹಾನಿ ಸಂಭವಿಸಿದೆ. ಕೇಪು ಗ್ರಾಮದ ನೀರ್ಕಜೆ ನಿವಾಸಿ ಪದ್ಮನಾಭ ಆಚಾರ್ಯ ಬಿನ್ ಕೃಷ್ಣಯ್ಯ ಆಚಾರ್ಯ ಅವರ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ. ಕೊಳ್ನಾಡು ಗ್ರಾಮದ ಪೀಳ್ಯಡ್ಕ ನಿವಾಸಿ ನಾರಾಯಣ ಗೌಡ ಅವರ ವಾಸದ ಮನೆಯ ಮೇಲೆ ತೆಂಗಿನಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ.
0 comments:
Post a Comment