ಬಂಟ್ವಾಳ, ಜುಲೈ 25, 2025 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಮತ್ತೆ ಮಳೆ ಹಾನಿ ಪ್ರಕರಣಗಳು ವರದಿಯಾಗಿದೆ.
ಪಿಲಾತಬೆಟ್ಟು ಗ್ರಾಮದ ನಿವಾಸಿ ಶ್ರೀಮತಿ ಕವಿತಾ ಕೋಂ ಪದ್ಮನಾಭ ಪೂಜಾರಿ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕೇಪು ಗ್ರಾಮದ ಗುತ್ತುದಡ್ಕ ನಿವಾಸಿ ನಾರಾಯಣ ಬಿನ್ ಕರಿಯ ಅವರ ಮನೆಯ ಮುಂಭಾಗ ಅಳವಡಿಸಿರುವ ಶೀಟ್ ಛಾವಣಿ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
ಪಂಜಿಕಲ್ಲು ಗ್ರಾಮದ ನೂಜಂತೂಡಿ ನಿವಾಸಿ ಡಾಕಯ್ಯ ಪೂಜಾರಿ ಬಿನ್ ಪರಮೇಶ್ವರ ಪೂಜಾರಿ ಅವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿರುತ್ತದೆ.
ಕುರಿಯಾಳ ಗ್ರಾಮದ ಪುಕ್ಕರೆಮಾರ್ ನಿವಾಸಿ ಇಂದಿರಾ ಆರ್ ಶೆಟ್ಟಿ ಕೋಂ ರಾಮಕೃಷ್ಣ ಶೆಟ್ಟಿ ಅವರ ವಾಸ್ತವ್ಯದ ಮನೆ ತೀವ್ರ ಹಾನಿಯಾಗಿದೆ.
ಕೇಪು ಗ್ರಾಮದ ಗುತ್ತುದಡ್ಕ ಎಂಬಲ್ಲಿ ನಾರಾಯಣ s/o ಕರಿಯ ಎಂಬವರ ಮನೆಯ ಮುಂಭಾಗ ಅಳವಡಿಸಿರುವ ಶೀಟ್ ಛಾವಣಿ ಮೇಲೆ ಮರ ಬಿದ್ದು ಹಾನಿಯಾಗಿರುತ್ತದೆ. ಪಿಲಾತಬೆಟ್ಟು ಗ್ರಾಮದ ಶ್ರೀಮತಿ ಕವಿತಾ ಕೋಂ ಪದ್ಮನಾಭ ಪೂಜಾರಿ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ. ತೆಂಕಬೆಳ್ಳೂರು ಗ್ರಾಮದ ಭವಾನಿ ಕೋಂ ಮೋಹನದಾಸ ಬೆಳ್ಚಡ ಅವರ ಮನೆಗೆ ಮರ ಬಿದ್ದು ಹಾನಿಯಾಗಿರುತ್ತದೆ
ತಾಲೂಕಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಗುರುವಾರ ಬೆಳಿಗ್ಗೆ 3.8 ರಲ್ಲಿ ಹರಿಯುತ್ತಿದ್ದ ನೇತ್ರಾವತಿ ಶುಕ್ರವಾರ ಬೆಳಿಗ್ಗೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು 6.9 ರಲ್ಲಿ ಹರಿಯುತ್ತಿದೆ. ಮಳೆ ಬಿರುಸು ಮುಂದುವರಿಯುವ ಮುನ್ನಚ್ಚರಿಕೆ ಇರುವುದರಿಂದ ತಗ್ಗುಪ್ರದೇಶದ ಜನರಿಗೆ ತೀವ್ರ ಕಟ್ಟೆಚ್ಚರ ವಹಿಸುವಂತೆ ತಾಲೂಕಾಡಳಿತ ಎಚ್ಚರಿಸಿದೆ.
0 comments:
Post a Comment