ಪುತ್ತೂರು, ಜುಲೈ 30, 2025 (ಕರಾವಳಿ ಟೈಮ್ಸ್) : ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 16/2018 ಕಲಂ 376(2)(ಜೆ)(ಎನ್), 506 ಐಪಿಸಿ ಹಾಗೂ ಪೋಕ್ಸೋ ಸೆಕ್ಷನ್ 6, ಪ್ರಕರಣದ ಆರೋಪಿ ಪಿರೇಶ್ ಅಲಿಯಾಸ್ ಪಿರೇಪ್ಪ ಸಂಗಪ್ಪ ಮಲ್ಲೋತ್ತರ ಎಂಬಾತನಿಗೆ ಐದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ವಿಚಾರಣೆಯ ಬಳಿಕ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಕಲಂ 376(2)(ಜೆ)(ಎನ್) ಐಪಿಸಿಗೆ 10 ವರ್ಷ ಸಾದಾ ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿದ್ದು, ಕಲಂ 506 ಐಪಿಸಿಗೆ 3 ತಿಂಗಳ ಸದಾ ಶಿಕ್ಷೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ. ಪೆÇೀಕ್ಸೋ ಕಾಯ್ದೆ ಸೆಕ್ಷನ್ 6 ರಂತೆ 10 ವರ್ಷ ಸಾದಾ ಶಿಕ್ಷೆ, 10 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ತನಿಖಾಧಿಕಾರಿಯಾಗಿ ಪುತ್ತೂರು ಉಪವಿಭಾಗದಲ್ಲಿ ಅಂದಿನ ಉಪಾಧೀಕ್ಷಕರಾಗಿದ್ದ ಶ್ರೀನಿವಾಸ್ ಬಿ ಎಸ್ ಅವರು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪುಷ್ಪರಾಜ್ ಕರ್ತವ್ಯ ನಿರ್ವಹಿಸಿದ್ದಾರೆ.
0 comments:
Post a Comment