ಬಂಟ್ವಾಳ, ಜುಲೈ 29, 2025 (ಕರಾವಳಿ ಟೈಮ್ಸ್) : ತಾಲೂಕಿನ ಸರಪಾಡಿ ಗ್ರಾಮದ ಅಲ್ಲಿಪಾದೆ ಹನುಮಾನ್ ಇಂಡಸ್ಟ್ರೀಸ್ ನಲ್ಲಿ ವೆಲ್ಡಿಂಗ್ ಹಾಗೂ ರಿಪೇರಿಗೆಂದು ತಂದಿರಿಸಲಾಗಿದ್ದ ಸುಮಾರು 63 ಸಾವಿರ ರೂಪಾಯಿ ಮೌಲ್ಯದ 35 ಶೀಟುಗಳನ್ನು ಜುಲೈ 12 ರಂದು ಕಳವು ಮಾಡಿದ ಘಟನೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಇಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವ ಸಂತೋಷ್ ಅಂಚನ್ (35) ಅವರು ಪೊಲೀಸರಿಗೆ ದೂರು ನೀಡಿದ್ದು, ಇಂಡಸ್ಟ್ರೀಸ್ ನಲ್ಲಿ ವೆಲ್ಡಿಂಗ್ ಮತ್ತು ರಿಪೇರಿಗೆಂದು ಸುಮಾರು 35 ಶೀಟುಗಳು ಬಂದಿದ್ದು, ಸದ್ರಿ ಶೀಟುಗಳನ್ನು ಅಂಗಡಿಯ ಎದುರಿನಲ್ಲಿ ಇಟ್ಟು ಜುಲೈ 12 ರಂದು ರಾತ್ರಿ 9.30 ಗಂಟೆಗೆ ಅಂಗಡಿಗೆ ಬೀಗ ಹಾಕಿ ಹೋಗಿದ್ದರು. ಜುಲೈ 13 ಭಾನುವಾರವಾಗಿದ್ದರಿಂದ ಅಂಗಡಿ ಬಾಗಿಲು ತೆರೆದಿರುವುದಿಲ್ಲ. ಜುಲೈ 14ರಂದು ಬೆಳಿಗ್ಗೆ 8.30ಕ್ಕೆ ಎಂದಿನಂತೆ ಅಂಗಡಿಗೆ ಬಂದು ನೋಡಿದಾಗ ಸದ್ರಿ ಶೀಟುಗಳು ಅಂಗಡಿಯಲ್ಲಿ ಕಾಣದಾಗಿದೆ. ಈ ಬಗ್ಗೆ ಅಂಗಡಿಯಲ್ಲಿ ಹುಡುಕಾಡಿದಾಗ ಸದ್ರಿ ಶೀಟುಗಳು ಕಳವಾಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಜುಲೈ 12 ರಂದು ರಾತ್ರಿ 10.20ರ ವೇಳೆಗೆ ಯಾರೋ ಅಪಚರಿತ ವ್ಯಕ್ತಿಗಳು ಜೀತೋ ವಾಹನದಲ್ಲಿ ಬಂದು ಅಂಗಡಿಯಲ್ಲಿದ್ದ 35 ಕಬ್ಬಿಣದ ತಗಡಿನ ಶೀಟುಗಳನ್ನು ಲೋಡ್ ಮಾಡಿ ಕಳವು ಮಾಡಿರುವುದು ತಿಳಿದು ಬಂದಿರುತ್ತದೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment