ಬಂಟ್ವಾಳ, ಜುಲೈ 30, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಒಂದು ತಿಂಗಳ ಪರ್ಯಂತ ನಡೆಯುವ ಯಕ್ಷಗಾನ ತಾಳಮದ್ದಳೆಯಲ್ಲಿ ನಾಗರಪಂಚಮಿಯಂದು ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದಿಂದ ಕವಿ ಗಣೇಶ ಕೊಲಕಾಡಿ ವಿರಚಿತ ಸಮರ್ಥ ಸಮೀರಜ ತಾಳಮದ್ದಳೆ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ನಿತೇಶ್ ಕುಮಾರ್ ವೈ, ಹಿಮ್ಮೇಳದಲ್ಲಿ ಮುರಳೀಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ (ಧರ್ಮರಾಯ, ಆರ್ಯಕ), ಸುರೇಶ ಶೆಟ್ಟಿ ಪೂಂಜಾಲಕಟ್ಟೆ (ಕೌರವ, ತಕ್ಷಕ), ಹರೀಶ ಆಚಾರ್ಯ ಬಾರ್ಯ (ಭೀಮ), ಶ್ರೀಧರ ಎಸ್ ಪಿ ಸುರತ್ಕಲ್ (ದುಶ್ಯಾಸನ, ವಾಸುಕಿ), ಶ್ರುತಿ ವಿಸ್ಮಿತ್ ಬಲ್ನಾಡು (ಐರಾವತ, ನಾಗಚರ) ಅವರು ಭಾಗವಹಿಸಿದ್ದರು. ಕಲಾಪೆÇೀಷಕ ಉಮೇಶ ಶೆಣೈ ರಾಮನಗರ ತಂಡದ ನೇತೃತ್ವ ವಹಿಸಿದ್ದರು. ಶ್ರಾವಣ ಮಾಸ ಯಕ್ಷಗಾನ ಸಮಿತಿ ಸಂಚಾಲಕ ನಾಗೇಂದ್ರ ಪೈ ಬಂಟ್ವಾಳ ಸ್ವಾಗತಿಸಿ, ವಂದಿಸಿದರು.
0 comments:
Post a Comment