ಮಂಗಳೂರು, ಆಗಸ್ಟ್ 26, 2025 (ಕರಾವಳಿ ಟೈಮ್ಸ್) : ಬ್ಯಾರಿ ಅಧ್ಯಯನ ಪೀಠ ಇದರ ವತಿಯಿಂದ ಮಂಗಳೂರು-ಹಂಪನಕಟ್ಟೆಯ ಮಿಲಾಗ್ರಿಸ್ ಕಾಲೇಜಿನ ಸಹಯೋಗದಲ್ಲಿ ಬ್ಯಾರಿ ಸಂಶೋಧನಾ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಹನೀಯರ ಸ್ಮರಣೆ ಕಾರ್ಯಕ್ರಮ ಆಗಸ್ಟ್ 28 ರಂದು ಬೆಳಿಗ್ಗೆ 9:30ಕ್ಕೆ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಪಿ ಎಲ್ ಧರ್ಮ ಕಾರ್ಯಕ್ರಮ ಉದ್ಘಾಟಿಸುವರು. ಮಿಲಾಗ್ರಿಸ್ ವಿದ್ಯಾ ಸಂಸ್ಥೆಯ ಸಂಚಾಲಕ ಬೊನವೆಂಚರ್ ನಜರೆತ್ ಅಧ್ಯಕ್ಷತೆ ವಹಿಸುವರು. ಬ್ಯಾರಿ ಸಂಶೋಧನಾ ಕ್ಷೇತ್ರಕ್ಕೆ ಕೊಡುಗೆ ನೀಡಿದ ಡಾ ಸುಶೀಲಾ ಉಪಾಧ್ಯಾಯ ಅವರ ಬಗ್ಗೆ ಬ್ಯಾರಿ ಅಕಾಡೆಮಿಯ ಮಾಜಿ ಸದಸ್ಯೆ ಆಯಿಶಾ ಎ ಎ ಪೆರ್ಲ, ಡಾ ವಹಾಬ್ ದೊಡ್ಡಮನೆ ಅವರ ಬಗ್ಗೆ ಬ್ಯಾರಿ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ ಎ ಮುಹಮ್ಮದ್ ಹನೀಫ್ ಹಾಗೂ ಪ್ರೊ ಬಿ ಎಂ ಇಚ್ಲಂಗೋಡು ಅವರ ಬಗ್ಗೆ ಬ್ಯಾರಿ ಅಕಾಡೆಮಿಯ ಮಾಜಿ ಸದಸ್ಯ ಸಂಶುದ್ದೀನ್ ಮಡಿಕೇರಿ ಅವರುಗಳು ವಿಷಯ ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.































0 comments:
Post a Comment