ಮಂಗಳೂರು, ಆಗಸ್ಟ್ 08, 2025 (ಕರಾವಳಿ ಟೈಮ್ಸ್) : ಸಫಲ ಕಾರ್ಯಾಚರಣೆ ನಡೆಸಿದ ಮಂಗಳೂರು ಸೆನ್ ಕ್ರೈಂ ಠಾಣಾ ಪೊಲೀಸರು ಖಚಿತ ಮಾಹಿತಿ ಮೇರೆಗೆ ನಾಲ್ಕು ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನು ಬಲೆಗೆ ಕೆಡಹುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಉಡುಪಿ ಜಿಲ್ಲೆಯ, ಉದ್ಯಾವರ ಗ್ರಾಮದ ಸಂಪಿಗೆ ನಗರ ನಿವಾಸಿ ಅಚ್ಚುತ ಪೂಜಾರಿ ಎಂಬವರ ಪೂಜಾರಿ ಎಂಬವರ ಮಗ ದೇವರಾಜ್ ಅಲಿಯಾಸ್ ದೇವು (38), ಕಾಪು ತಾಲೂಕು, ಪಲಿಮಾರು ಗ್ರಾಮದ ಪದು ನಿವಾಸಿ ಚಂದ್ರಶೇಖರ ಸಾಲ್ಯಾನ್ ಎಂಬವರ ಪುತ್ರ ಜೀವನ್ ಅಮೀನ್ (32), ಮಂಗಳೂರು ನಗರ, ಮೂಡುಶೆಡ್ಡೆ, ತಿರುವೈಲು ಗ್ರಾಮದ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಇಮ್ರಾನ್ (40) ಹಾಗೂ ಮಂಗಳೂರು, ದಂಬೆಲ್-ಅಶೋಕನಗರ ನಿವಾಸಿ ದಿವಂಗತ ಮೊಹಮ್ಮದ್ ಕುಂಞÂ ಅವರ ಮಗ ಬಿ ಮೊಹಮ್ಮದ್ ಹನೀಫ್ (56) ಎಂದು ಹೆಸರಿಸಲಾಗಿದೆ.
ಮಂಗಳೂರು ನಗರದ ಪಡುಕೋಡಿ ಗ್ರಾಮದ ಪಡ್ಪು ಹೌಸ್, ಬಂಗ್ರ ಕೂಳೂರು ಬಳಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ತಯಾರಿ ನಡೆಸುತ್ತಿರುವ ಬಗ್ಗೆ ಗುರುವಾರ ಸೆನ್ ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ 51 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ, 7 ಮೊಬೈಲ್ ಫೋನ್, ಮಾರುತಿ ಬೆಲೆನೋ, ಮಹೀಂದ್ರಾ ಸ್ಕಾರ್ಪಿಯೋ ಕಾರುಗಳು, 11,990/- ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ.
ಆರೋಪಿ ದೇವರಾಜ್ ಪೂಜಾರಿ ಅಲಿಯಾಸ್ ದೇವು ಎಂಬಾತನು ಉಡುಪಿ, ಶಿವಮೊಗ್ಗ, ಮಂಗಳೂರು ನಗರದಲ್ಲಿ ಮಾದಕ ವಸ್ತುವಾದ ಎಂಡಿಎಂಎಯನ್ನು ಮಾರಾಟ (ಪೆಡ್ಲರ್) ಮಾಡುವವರಾಗಿರುತ್ತಾನೆ ಹಾಗೂ ಉಳಿದ 3 ಜನ ಆರೋಪಿಗಳು ಮಂಗಳೂರು ನಗರದಲ್ಲಿ ಎಂಡಿಎಂಎಯನ್ನು ಮಾರಾಟ (ಪೆಡ್ಲರ್) ಮಾಡುವವರಾಗಿರುತ್ತಾರೆ. ಎಂಡಿಎಂಎಯನ್ನು ಚಿಕ್ಕ ಚಿಕ್ಕ ಪ್ಯಾಕೇಟ್ ಗಳಲ್ಲಿ ಪ್ಯಾಕ್ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಆರೋಪಿಗಳ ವಿರುದ್ದ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 44/2025 ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
0 comments:
Post a Comment