ಮಂಗಳೂರು : ಸೆ. 2 ಹಾಗೂ 6 ರಂದು ತಾಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಫುಟ್‍ಬಾಲ್ ಕ್ರೀಡಾಕೂಟ - Karavali Times ಮಂಗಳೂರು : ಸೆ. 2 ಹಾಗೂ 6 ರಂದು ತಾಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಫುಟ್‍ಬಾಲ್ ಕ್ರೀಡಾಕೂಟ - Karavali Times

728x90

28 August 2025

ಮಂಗಳೂರು : ಸೆ. 2 ಹಾಗೂ 6 ರಂದು ತಾಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಫುಟ್‍ಬಾಲ್ ಕ್ರೀಡಾಕೂಟ

 ಮಂಗಳೂರು, ಆಗಸ್ಟ್ 28, 2025 (ಕರಾವಳಿ ಟೈಮ್ಸ್) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಫುಟ್‍ಬಾಲ್ ಕ್ರೀಡಾಕೂಟ ಸೆಪ್ಟೆಂಬರ್ 2ರಂದು ಕರಾವಳಿ ಮೈದಾನದಲ್ಲಿ  ಬೆಳಿಗ್ಗೆ 8.30ಕ್ಕೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಫುಟ್‍ಬಾಲ್ ಕ್ರೀಡಾಕೂಟ (ಪುರುಷರಿಗೆ ಮಾತ್ರ) ಸೆಪ್ಟೆಂಬರ್ 6ರಂದು ನಗರದ ಮಂಗಳಾ ಕ್ರೀಡಾಂಗಣ ಸಂಕೀರ್ಣದಲ್ಲಿರುವ ಕರಾವಳಿ ಮೈದಾನದಲ್ಲಿ  ಸಂಘಟಿಸಲಾಗುತ್ತದೆ.     

ಈಗಾಗಲೇ ಮೊಬೈಲ್ ಆಪ್/ https://dasaracmcup.2025.etrpindia.com/KA-sports  ಅಥವಾ  ಕ್ಯೂ ಆರ್  ಕೋಡ್ ಮೂಲಕ ಭರ್ತಿ ಮಾಡಿ ಮಂಗಳೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಫುಟ್‍ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸುವ   ಮಂಗಳೂರು ತಾಲೂಕಿನ ಪುರುಷ  ಕ್ರೀಡಾಪಟುಗಳು ಸೆಪ್ಟೆಂಬರ್ 2ರಂದು ಬೆಳಿಗ್ಗೆ 8.30ಕ್ಕೆ ಕರಾವಳಿ ಮೈದಾನದಲ್ಲಿ ಹಾಜರಾಗುವಂತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಫುಟ್‍ಬಾಲ್ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಫುಟ್‍ಬಾಲ್ ಸ್ಪರ್ಧೆಯಲ್ಲಿ  ಭಾಗವಹಿಸಲು  ಅರ್ಹರಾಗಿದ್ದು, ಕ್ರೀಡಾಪಟುಗಳು ಸೆಪ್ಟೆಂಬರ್ 6ರಂದು ಬೆಳಿಗ್ಗೆ 8.30ಕ್ಕೆ ನಗರದ ಮಂಗಳಾ ಕ್ರೀಡಾಂಗಣ ಸಂಕೀರ್ಣದ ಕರಾವಳಿ ಮೈದಾನದಲ್ಲಿ ಹಾಜರಾಗಬೇಕು.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮಂಗಳಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು  ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು (ದೂರವಾಣಿ ಸಂಖ್ಯೆ 0824-2451264) ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಸೆ. 2 ಹಾಗೂ 6 ರಂದು ತಾಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಫುಟ್‍ಬಾಲ್ ಕ್ರೀಡಾಕೂಟ Rating: 5 Reviewed By: karavali Times
Scroll to Top