ಧರ್ಮಸ್ಥಳ‌ ಧರ್ಮ ರಕ್ಷಣಾ ವೇದಿಕೆ ಬಂಟ್ವಾಳ ಘಟಕದ ವತಿಯಿಂದ ಬಿ.ಸಿ.ರೋಡಿನಲ್ಲಿ ಜನಾಗ್ರಹ ಸಭೆ - Karavali Times ಧರ್ಮಸ್ಥಳ‌ ಧರ್ಮ ರಕ್ಷಣಾ ವೇದಿಕೆ ಬಂಟ್ವಾಳ ಘಟಕದ ವತಿಯಿಂದ ಬಿ.ಸಿ.ರೋಡಿನಲ್ಲಿ ಜನಾಗ್ರಹ ಸಭೆ - Karavali Times

728x90

20 August 2025

ಧರ್ಮಸ್ಥಳ‌ ಧರ್ಮ ರಕ್ಷಣಾ ವೇದಿಕೆ ಬಂಟ್ವಾಳ ಘಟಕದ ವತಿಯಿಂದ ಬಿ.ಸಿ.ರೋಡಿನಲ್ಲಿ ಜನಾಗ್ರಹ ಸಭೆ

 ಬಂಟ್ವಾಳ, ಆಗಸ್ಟ್ 21, 2025 (ಕರಾವಳಿ ಟೈಮ್ಸ್) :  ಶ್ರೀ ಧರ್ಮಸ್ಥಳ ಧರ್ಮರಕ್ಷಣಾ ವೇದಿಕೆ ಬಂಟ್ವಾಳ ತಾಲೂಕು ಇದರ ವತಿಯಿಂದ  ಬಿ ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಜನಾಗ್ರಹ ಸಭೆಯು ಬುಧವಾರ ನಡೆಯಿತು.

  ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎ ರುಕ್ಮಯ್ಯ ಪೂಜಾರಿ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ದ ನಿರಂತರವಾದ ಸುಳ್ಳು ಆಪಾದನೆಗಳು, ಆಧಾರ ರಹಿತ ಕಪೋಲ ಕಲ್ಪಿತ ಸುದ್ದಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟು ಕ್ಷೇತ್ರದ ಧರ್ಮಾಧಿಕಾರಿಗಳನ್ನು ಕೆಟ್ಟ ಪದಗಳಿಂದ ನಿಂದಿಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೃತ್ಯ ಖಂಡನೀಯ.  ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಬೇಕು, ಆದರೆ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಷಡ್ಯಂತ್ರ ನಡೆಸುವ ಆರೋಪಿಗಳಿಗೆ ಕೂಡಾ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

    ಮಾಜಿ ಸಚಿವ ಬಿ ನಾಗರಾಜ ಶೆಟ್ಟಿ, ಪ್ರಮುಖರಾದ ಸುದರ್ಶನ್ ಜೈನ್, ಹರಿಕೃಷ್ಣ ಬಂಟ್ವಾಳ, ಪ್ರಕಾಶ್ ಕಾರಂತ್, ಅಶೋಕ್ ಶೆಟ್ಟಿ ಸರಪಾಡಿ, ರಾಮದಾಸ್ ಬಂಟ್ವಾಳ, ಬಿ ಪದ್ಮಶೇಖರ ಜೈನ್, ಎಂ ತುಂಗಪ್ಪ ಬಂಗೇರ,ಸದಾನಂದ ನಾವೂರು, ಪ್ರಭಾಕರ ಪ್ರಭು, ಸುಭಾಶ್ಚಂದ್ರ ಜೈನ್, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಕೃಷ್ಣಕುಮಾರ್ ಪೂಂಜಾ, ರೊನಾಲ್ಡ್ ಡಿ ಸೋಜಾ, ಸುಲೋಚನಾ ಜಿ ಕೆ ಭಟ್, ಮಾಧವ ಮಾವೆ, ದೇವಪ್ಪ ಪೂಜಾರಿ, ಎ ಗೋವಿಂದ ಪ್ರಭು, ಯಶವಂತ ದೇರಾಜೆ, ತುಕಾರಾಂ ಪೂಜಾರಿ, ಪ್ರವೀಣ್ ಕಾಡಬೆಟ್ಟು, ಸುರೇಶ್ ಕುಲಾಲ್, ವಸಂತ ಮಣಿಹಳ್ಳ, ಪುರುಷೋತ್ತಮ, ಶೇಖರ ಸಾಮಾನಿ, ನವೀನ್ ಚಂದ್ರ ಶೆಟ್ಟಿ, ಜಯಚಂದ್ರ, ಜಯಕೀರ್ತಿ ಜೈನ್, ಕೆ ಬಾಲಕೃಷ್ಣ ಆಳ್ವ ಕೊಡಾಜೆ ಮೊದಲಾದವರು ಭಾಗವಹಿಸಿದ್ದರು

    ಬಿ ಸಿ ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ಸೇರಿದ ಜನರನ್ನುದ್ದೇಶಿಸಿ ಯಕ್ಷಗಾನ ಅರ್ಥಧಾರಿ ಅಶೋಕ ಭಟ್ ಉಜಿರೆ ಮಾತನಾಡಿದರು. ಬಳಿಕ ಬಂಟ್ವಾಳ ತಹಶೀಲ್ದಾರ್ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಧರ್ಮಸ್ಥಳ‌ ಧರ್ಮ ರಕ್ಷಣಾ ವೇದಿಕೆ ಬಂಟ್ವಾಳ ಘಟಕದ ವತಿಯಿಂದ ಬಿ.ಸಿ.ರೋಡಿನಲ್ಲಿ ಜನಾಗ್ರಹ ಸಭೆ Rating: 5 Reviewed By: lk
Scroll to Top