ಧರ್ಮಸ್ಥಳ, ಆಗಸ್ಟ್ 27, 2025 (ಕರಾವಳಿ ಟೈಮ್ಸ್) : ಜೈನ ಧರ್ಮ ಹಾಗೂ ಜೈನ ಧರ್ಮೀಯರ ಭಾವನೆಗಳಿಗೆ ಅವಮಾನಪಡಿಸುವ ರೀತಿಯಲ್ಲಿ ಯ್ಯೂಟೂಬ್ ಚಾನೆಲಿಗೆ ಸಂದರ್ಶನ ನೀಡಿ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟ ಬಗ್ಗೆ ಗಿರೀಶ್ ಮಟ್ಟಣ್ಣವರ್ ಹಾಗೂ ಕುಡ್ಲ ರಾಂಪೇಜ್ ಯ್ಯೂಟೂಬ್ ಚಾನೆಲ್ ಮಾಲಿಕನ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜಿತ್ ನಾಗಪ್ಪ ಬಸಾಪುರ್ ಹುಬ್ಬಳ್ಳಿ ಅವರು ನೀಡಿದ ದೂರಿನಂತೆ ಹುಬ್ಬಳ್ಳಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ಸರಹದ್ದಿನ ಆದಾರದ ಮೇಲೆ ಬೆಳ್ತಂಗಡಿ ಪೆÇಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದನ್ನು ಮತ್ತು ಮಂಜುನಾಥ ಜಕ್ಕಣ್ಣವರ ಧಾರವಾಡ ಅವರು ಧಾರವಾಡ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿನ ಘಟನೆಯು ಒಂದೇ ಆಗಿರುವ ಹಿನ್ನಲೆಯಲ್ಲಿ ದೂರುದಾರರು ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡು ಆಗಸ್ಟ್ 12 ರಂದು ಬೆಳ್ತಂಗಡಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 86/2025 ಕಲಂ 196(1) (ಎ) 299 ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
0 comments:
Post a Comment