ಬಂಟ್ವಾಳ, ಆಗಸ್ಟ್ 08, 2025 (ಕರಾವಳಿ ಟೈಮ್ಸ್) : ಅಲ್-ಅಮೀನ್ ಚಾರಿಟಿ ಗ್ರೂಪ್ ದಕ್ಷಿಣ ಕನ್ನಡ ಇದರ ಆಶ್ರಯದಲ್ಲಿ ಕಣಚೂರು ಆಸ್ಪತ್ರೆ ಹಾಗೂ ರೀಸರ್ಚ್ ಸೆಂಟರ್ ನಾಟೆಕಲ್-ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆಗಸ್ಟ್ 10 ರಂದು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಇಡ್ಕಿದು ಗ್ರಾಮದ ಕೋಲ್ಪೆ ಎಂಬಲ್ಲಿ ನಡೆಯಲಿದೆ.
ಶಿಬಿರದಲ್ಲಿ ಕಣ್ಣಿನ ತಜ್ಞರು, ಚರ್ಮರೋಗ ತಜ್ಞರು, ವೈದ್ಯಕೀಯ ಶಾಸ್ತ್ರ ತಜ್ಞರು, ಮಕ್ಕಳ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ಮೂಳೆ ತಜ್ಞರು, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು ಭಾಗವಹಿಸಲಿದ್ದು, ಶಿಬಿರಾರ್ಥಿಗಳ ಉಚಿತ ತಪಾಸಣೆ ನಡೆಸಲಿದ್ದಾರೆ.
ಜನರಲ್ ಮೆಡಿಸಿನ್, ಅಸ್ತಮಾ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಚಿಕಿತ್ಸೆ, ಮಕ್ಕಳ ಶಸ್ತ್ರ ಚಿಕಿತ್ಸೆ, ಎಲುಬು ಮತ್ತು ಕೀಲು ವಿಭಾಗ, ಬೆನ್ನು ಮೂಲೆ ಚಿಕಿತ್ಸೆ, ಮೊಣಕಾಲು ಚಿಕಿತ್ಸೆ, ಅಪೆಂಡಿಕ್ಸ್, ಅಲ್ಸರ್, ಹರ್ನಿಯಾ, ಮೂಲವ್ಯಾಧಿ, ಗರ್ಭಕೋಶದ ಗಡ್ಡೆ, ಕಿವಿ, ಮೂಗು, ಗಂಟಲು, ಥೈರಾಯಿಡ್, ಸಂಧಿವಾತ, ಉದರ ಸಂಬಂಧಿ ಕಾಯಿಲೆಗಳು, ವೇರಿಕೋಸ್ ವೇನ್, ನರ ಸಂಬಂಧಿ ಚಿಕಿತ್ಸೆಗಳ ತಪಾಸಣೆ, ಚರ್ಮರೋಗ ತಪಾಸಣೆ ಶಿಬಿರದಲ್ಲಿ ಮಾಡಲಾಗುವುದು. ಶಿಬಿರದಲ್ಲಿ ಲಭ್ಯವಿರುವ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು.
ಅಲ್ಲದೆ ಶಿಬಿರದಲ್ಲಿ ಉಚಿತ ಅಭಾ ಕಾರ್ಡ್ ನೋಂದಾವಣೆ ಮಾಡಲಾಗುವುದು. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಡಿಬಿಸಿಎಸ್ ಸಹಯೋಗದಲ್ಲಿ ಕಣಚೂರು ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು. ಶಿಬಿರಾರ್ಥಿಗಳು ಶಿಬಿರಕ್ಕೆ ಬರುವಾರ ಆಧಾರ್ ಕಾರ್ಡ್ ತರುವಂತೆ ಸೂಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9686935071, 7624827363 ಹಾಗೂ 7353774782 ಗಳನ್ನು ಸಂಪರ್ಕಿಸಬಹುದು ಎಂದು ಅಲ್ ಅಮೀನ್ ಚಾರಿಟಿ ಗ್ರೂಪ್ ವ್ಯವಸ್ಥಾಪಕ ಸಿದ್ದೀಕ್ ಸೂರ್ಯ ಹಾಗೂ ಸ್ಥಾಪಕ ಸಿನಾನ್ ಎಂ ಎಸ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment