ಮಂಗಳೂರು, ಆಗಸ್ಟ್ 31, 2025 (ಕರಾವಳಿ ಟೈಮ್ಸ್) : ಮನೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ 17 ಮಂದಿ ಆರೋಪಿಗಳ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು, ಬೊಲ್ಪುಗುಡ್ಡೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಶನಿವಾರ (ಆಗಸ್ಟ್ 30) ರಾತ್ರಿ 11-30 ರವೇಳೆಗೆ ಖಚಿತ ಮಾಹಿತಿ ಮೇರೆಗೆ ಕಾವೂರು ಪೊಲಿಸ್ ಠಾಣಾ ಪಿಎಸ್ಸೈ ಮಲ್ಲಿಕಾರ್ಜುನ ಬಿರಾದಾರ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. ಇಲ್ಲಿನ ಬೊಲ್ಪುಗುಡ್ಡೆ ಗ್ರಾಮದಲ್ಲಿ ಮನೆ ನಂಬ್ರ 5-120/5(8) ರಲ್ಲಿ ಅಕ್ರಮವಾಗಿ ಹಣ ಪಣವಾಗಿಟ್ಟು ಅಂದರ್ ಬಾಹರ್ (ಉಲಾಯಿ ಪಿದಾಯಿ) ಜುಗಾರಿ ಆಟವಾಡುತ್ತಿದ್ದ ಆರೋಪಿಗಳಾದ ದಿಕ್ಷೀತ್ ದೇರೆಬೈಲ್-ಕೊಂಚಾಡಿ (31), ದಯಾನಂದ ಕೊಂಚಾಡಿ (40), ರಾಘವೇಂದ್ರ ದೇರೇಬೈಲ್ (41), ವೈಶಾಕ್ ಶೆಟ್ಟಿ ಯೆಯ್ಯಾಡಿ (25), ಪ್ರವೀಣ್ ಕುಮಾರ್ ಫರಂಗಿಪೇಟೆ (40), ಶಾಹುಲ್ ಹಮೀದ್ ಕಾಪು (50), ತಿಲಕ್ ರಾಜ್ ನಡುಗೋಡು-ಕಟೀಲು, ಬಜಪೆ (31), ಜಯಾನಂದ್ ಎಸ್ ವಾಮಂಜೂರು (44), ಉಮೇಶ್ ದೇರೇಬೈಲ್ (41), ಗೌತಮ್ ದೇರೇಬೈಲ್ (32), ಲಾರೆನ್ಸ್ ರಾಜಾ ಡಿಸೋಜಾ ಕೂಳೂರು (48), ಇನಾಸ್ ಡಿಸೋಜಾ ಹೊಯ್ಗೆಗದ್ದೆ-ಉಳ್ಳಾಲ, ಮುಹಮ್ಮದ್ ಅಶ್ರಫ್ ಉಳ್ಳಾಲಬೈಲ್, ಮೊಹಮ್ಮದ್ ಫಯಾಜ್ ಪೆರ್ಮನ್ನೂರು (42), ಮುಸ್ತಾಫಾ ಉಳ್ಳಾಲ (61), ಸುನೀಲ್ ಡಿಸೋಜಾ ಅಡಂಕುದ್ರು (41), ಕಣ್ಣನ್ ರಾಮನಾಡು-ತಮಿಳುನಾಡು (42) ಎಂಬವರುಗಳಿಂದ ಒಟ್ಟು 1.92 ಲಕ್ಷ ರೂಪಾಯಿ ನಗದು ಹಣವನ್ನು ಹಾಗೂ ಆರೋಪಿಗಳಿಂದ 18 ಮೊಬೈಲ್ ಪೊನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 4 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಆರೋಪಿಗಳ ಹಾಗೂ ಮನೆ ಮಾಲೀಕರು ಮತ್ತು ಬಾಡಿಗೆದಾರರ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 129/2025 ಕಲಂ 78 ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು 112 ಭಾರತೀಯ ನ್ಯಾಯ ಸಂಹಿತೆ-2023ರಂತೆ ಪ್ರಕರಣ ದಾಖಲಾಗಿದೆ.
ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ ಕೆ ಅವರ ಸೂಚನೆಯಂತೆ ಕಾವೂರು ಠಾಣಾ ಪಿಎಸ್ಸೈ ಮಲ್ಲಿಕಾರ್ಜುನ ಬಿರಾದಾರ್ ನೇತೃತ್ವದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿಗಳಾದ ಚಂದ್ರು, ರೇಜಿ, ದಾಮೋದರ, ಹಾಲೇಶ್ ಹಾಗೂ ಠಾಣಾ ಸಿಬ್ಬಂದಿಗಳಾದ ಜಯರಾಮ್, ಮಂಜುನಾಥ, ನಾಗರಾಜ್ ಹಾಗೂ ಇತರ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
0 comments:
Post a Comment