ಬಂಟ್ವಾಳ, ಆಗಸ್ಟ್ 13, 2025 (ಕರಾವಳಿ ಟೈಮ್ಸ್) : ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧೀನದ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸದ ಶಿಕ್ಷಕ-ರಕ್ಷಕರ ಸಭೆಯು ಇತ್ತೀಚೆಗೆ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ (ಮೆಸ್ಕಾಂ) ನೇರಳಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಸ್ ಎಂ ರಫೀಕ್ ಹಾಜಿ ನೇರಳಕಟ್ಟೆ ಉದ್ಘಾಟಿಸಿದರು. ಕೊಡಾಜೆ ಮದ್ರಸ ಮುಖ್ಯ ಶಿಕ್ಷಕ ಶಿಹಾಬುದ್ದೀನ್ ಫೈಝಿ, ಸಹ ಶಿಕ್ಷಕರಾದ ಮಕ್ಬೂಲ್ ಫೈಝಿ ಹಾಗೂ ಇಬ್ರಾಹಿಂ ಬಾತಿಷಾ ಇರ್ಫಾನಿ ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರದ ಬಗ್ಗೆ ವಿವರಿಸಿದರು.
ಮಸೀದಿ ಕಾರ್ಯಕಾರಿ ಸಮಿತಿ ಸದಸ್ಯರಾದ ಫಾರೂಕ್ ಗೋಳಿಕಟ್ಟೆ, ಹಮೀದ್ ಪರ್ಲೊಟ್ಟು, ಇಬ್ರಾಹಿಂ ಎಸ್ ಎಂ ಎಸ್, ಶಿಕ್ಷಕರಾದ ಅಶ್ರಫ್ ಯಮಾನಿ, ರಶೀದ್ ಅಝ್ಹರಿ, ಹಾರಿಸ್ ಮೌಲವಿ ಸಭೆಯಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಪ್ರಥಮ ಕಿರು ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಹಿಬಾ ಫಾತಿಮಾ, ಆಯಿಷಾ ಸಝಾ, ನಫೀಸಾ ಮಾಹಿನ್, ಸಫಿಯಾ ಕಿಂಝಾ, ಅಶ್ಫಾನ್, ನಿಹಾಲ್ ಫಾತಿಮಾ, ಅಯಾನ್ ನೆಡ್ಯಾಲ್, ಇಬಾನ್, ಮುಹಮ್ಮದ್ ಶಿಝಾನ್, ಶಯಾಮ್, ಅರಾನ್, ಆಯಿಷಾ ಮಿರ್ಝಾ, ಸಅದಿಯಾ, ಅನ್ನಾಮ್, ಫಿಝ್ಝಾ ಅವರಿಗೆ ಬಹುಮಾನ ವಿತರಿಸಲಾಯಿತು. ಮದ್ರಸ ಉಸ್ತುವಾರಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment