ಬಂಟ್ವಾಳ, ಆಗಸ್ಟ್ 25, 2025 (ಕರಾವಳಿ ಟೈಮ್ಸ್) : ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ವಾರ್ಷಿಕ ಮಹಾ ಸಭೆ ಮತ್ತು ಹಿರಿಯ ನಾಗರಿಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಬಿ ಸಿ ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಹಿರಿಯ ನ್ಯಾಯವಾದಿ, ಸರಕಾರಿ ಅಭಿಯೋಜಕ ಉದಯಾನಂದ ಎ ಅವರು ಮಾತನಾಡಿ, ಒಂದು ಕಾಲದಲ್ಲಿ ಅವಿಭಕ್ತ ಕುಟುಂಬವನ್ನು ಹೊಂದಿ ಹಿರಿಯರಿಂದಲೇ ಮಾರ್ಗದರ್ಶನ ಪಡೆಯುತ್ತಿದ್ದ ದೇಶದಲ್ಲಿ ಇಂದು ಹಿರಿಯ ನಾಗರಿಕರ ಹಕ್ಕು ರಕ್ಷಣಾ ಕಾಯ್ದೆ ಜಾರಿಗೆ ಬಂದಿರುವುದು ನಮ್ಮ ದುರ್ದೈವ ಎಂದರು. ಹಿರಿಯರು, ಕಿರಿಯರು ಜೊತೆ ಸೇರಿದಾಗ ಸಮಾಜ ಬಾಂಧವ್ಯ ಬೆಳೆಯುವುದರೊಂದಿಗೆ ಅಭಿವೃದ್ಧಿ ಸಾಧ್ಯ ಎಂದ ಅವರು ಕಿರಿಯರು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಅತಿಥಿಯಾಗಿದ್ದ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಅಧ್ಯಕ್ಷ ಭಾಸ್ಕರ ಪೆರುವಾಯಿ ಮಾತನಾಡಿ, ಭವಿಷ್ಯದಲ್ಲಿ ಸಂಘದ ಕಟ್ಟಡ ನಿರ್ಮಾಣ ಅಥವಾ ಯಾವುದೇ ಜನಪಯೋಗಿ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಸೋಮಯ್ಯ ಹನ್ನೆರಡೆ ಅಧ್ಯಕ್ಷತೆ ವಹಿಸಿದ್ದರು. ವಸ್ತ್ರೋದ್ಯಮಿ ರಮಾನಂದ ನಾರಾಯಣ ಬಂಗೇರ ನಾಸಿಕ್, ಉದ್ಯಮಿ ಮನೋಜ್ ಬಾಸಬೈಲು, ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಮೇಶ ಸಂಚಯಗಿರಿ, ಕರ್ನಾಟಕ ರಾಜ್ಯ ಕರಾವಳಿ ಕುಲಾಲರ ಯುವ ವೇದಿಕೆ ಅಧ್ಯಕ್ಷ ಸುಮಿತ್ ಸಾಲಿಯಾನ್ ವೇದಿಕೆಯಲ್ಲಿದ್ದರು.
ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿ, ಗೌರವಾಧ್ಯಕ್ಷ ಟಿ ಶೇಷಪ್ಪ ಮಾಸ್ಟರ್ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎಂ ವರದಿ ವಾಚಿಸಿ, ವಂದಿಸಿದರು. ಖಚಾಂಚಿ ಸೋಮಪ್ಪ ಬಂಗೇರ ಲೆಕ್ಕಪತ್ರ ಮಂಡಿಸಿದರು. ಶಾಂಭವಿ ಸೋಮಯ್ಯ ಪ್ರಾರ್ಥಿಸಿದರು. ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ 72 ವರ್ಷ ತುಂಬಿದ ಸಂಘದ ಸದಸ್ಯರಾದ ಕೃಷ್ಣ ಶ್ಯಾಮ್ ಬಿ ಸಿ ರೋಡು, ಜನಾರ್ಧನ ಸಾಲಿಯಾನ್ ವೀರಕಂಭ, ಧರ್ಣಪ್ಪ ಮುಡಿಪು, ಜಿನ್ನಪ್ಪ ಮೂಲ್ಯ ವೀರಕಂಭ, ವಿಶ್ವನಾಥ ಸಾಲಿಯಾನ್ ಸೊರ್ನಾಡು, ನೀಲಪ್ಪ ಸಾಲಿಯಾನ್ ತುಂಬೆ, ಧೋಳ ಮೂಲ್ಯ ಪುಡಿಕಲಕೋಡಿ, ಅಣ್ಣಪ್ಪ ಮೂಲ್ಯ ಅಂಗರಗುಂಡಿ, ಭೋಜ ಸಾಲಿಯಾನ್ ಮೈರಾನ ಪಾದೆ, ಮೋಹನ ಸಾಲಿಯಾನ್ ಅರ್ಕಮ, ಡಿ. ಚಂದಪ್ಪ ಮೂಲ್ಯ ಉಪ್ಪಿನಂಗಡಿ, ಕೃಷ್ಣಪ್ಪ ಕುಲಾಲ್ ಕುಪ್ಪಿಲ, ಶೇಷಪ್ಪ ಸಾಲಿಯಾನ್ ಅಮ್ಟಾಡಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಸದಸ್ಯರಾದ ದಿನಕರ ಉದ್ಯಾವರ, ರೋಕಿಂಣಿ, ಓಬಯ್ಯ ಮೂಲ್ಯ ಜತೆ. ಕಾರ್ಯದರ್ಶಿ ಶ್ರೀನಿವಾಸ ಅವರು ಸನ್ಮಾನ ಪತ್ರ ವಾಚಿಸಿದರು.
ಅಗಲಿದ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ರಾಮ ಮೂಲ್ಯ ಮರ್ದೊಳಿ ಅಗಲಿದ ಸದಸ್ಯರ ಮಾಹಿತಿ ನೀಡಿದರು. ಈ ಸಂದರ್ಭ 2025-27ನೇ ಸಾಲಿಗೆ ಕಾರಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ದೇವದಾಸ್ ಮಾಸ್ಟರ್ ಕೊಡಾಣ್ ನಡೆಸಿದರು. ಸದಸ್ಯರಾದ ವಿಠಲ ಮೂಲ್ಯ ಜಕ್ರಿಬೆಟ್ಟು, ಕೃಷ್ಣಪ್ಪ ಬಡ್ಡಕಟ್ಟೆ ಸಹಕರಿಸಿದರು.













0 comments:
Post a Comment