ಬಂಟ್ವಾಳ, ಆಗಸ್ಟ್ 08, 2025 (ಕರಾವಳಿ ಟೈಮ್ಸ್) : ಹೆದ್ದಾರಿ ಕಾಮಗಾರಿ ಗುತ್ತಿಗೆ ಸಂಸ್ಥೆ ಕೆ ಎನ್ ಆರ್ ಸಂಸ್ಥೆಗೆ ಸೇರಿದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನರಿಕೊಂಬು ಗ್ರಾಮದ ನೆಹರುನಗರ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಗಾಯಗೊಂಡ ಬೈಕ್ ಸವಾರನನ್ನು ಸುಶಾಂತ್ ಕುಮಾರ್ ಎಂದು ಹೆಸರಿಸಲಾಗಿದೆ. ಇವರು ಬಿ ಸಿ ರೋಡು ಕಡೆಯಿಂದ ಕಲ್ಲಡ್ಕ ಕಡೆಗೆ ಸಂಚರಿಸುತ್ತಿದ್ದ ವೇಳೆ ಕಲ್ಲಡ್ಕ ಕಡೆಯಿಂದ ಬಿ ಸಿ ರೋಡು ಕಡೆಗೆ ಹೆದ್ದಾರಿಯಲ್ಲಿ ಕೆ ಎನ್ ಆರ್ ಕಂಪೆನಿಗೆ ಸಂಬಂಧಿಸಿದ ಅಬ್ದುಲ್ ನೂರ್ ಖಾಜಿ ಎಂಬವರು ಚಲಾಯಿಸಿಕೊಂಡು ಬಂದ ಟಿಪ್ಪರ್ ಲಾರಿ ನೆಹರೂ ನಗರ ಕ್ರಾಸಿನಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ತಿರುಗಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಾಂಗ್ ಸೈಡಿನಲ್ಲಿ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯರು ಉಪಚರಿಸಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ನೆಹರುನಗರ ನಿವಾಸಿ ಇಮ್ರಾನ್ ನಝೀರ್ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment