ಮಂಗಳೂರು, ಆಗಸ್ಟ್ 21, 2025 (ಕರಾವಳಿ ಟೈಮ್ಸ್) : 2025-26ನೇ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಲಾಗುವ ವಿವಿಧ ಸ್ನಾತಕೋತ್ತರ/ ಪಿ.ಜಿ, ಡಿಪ್ಲೊಮಾ/ ಸರ್ಟಿಫಿಕೇಟ್ ಕಾರ್ಯಕ್ರಮಗಳ ಪ್ರವೇಶಾತಿಗೆ ಸಂಬಂಧಿಸಿದಂತೆ, ಸ್ನಾತಕೋತ್ತರ ವಿಭಾಗಗಳಲ್ಲಿ/ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳು (ಸರಕಾರಿ ಕೋಟಾ ಸೀಟುಗಳಿಗೆ) ಮತ್ತು ಸರಕಾರಿ ಕಾಲೇಜುಗಳು ಇಲ್ಲಿ ಭರ್ತಿಯಾಗದೆ ಖಾಲಿ ಇರುವ ಸೀಟುಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶಾತಿಯನ್ನು ಯುಯುಸಿಎಂಎಸ್ (ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ) ಪೆÇೀರ್ಟಲ್ ಮೂಲಕ ಮಾಡಲಾಗುತ್ತದೆ. ಯುಯುಸಿಎಂಎಸ್ ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯು ವೆಬ್‍ಸೈಟ್ https://mangaloreuniversity.ac.in/mu-uucms ನಲ್ಲಿ ಲಭ್ಯವಿದೆ.
ವಿದ್ಯಾರ್ಥಿಗಳು https://uucms.karnataka.gov.in/Login/Index ನಲ್ಲಿ ಲಭ್ಯವಿರುವ ಯುಯುಸಿಎಂಎಸ್ ಪೆÇೀರ್ಟಲ್ ಮೂಲಕ ಆಗಸ್ಟ್ 30ರೊಳಗೆ ಅರ್ಜಿ ಸಲ್ಲಿಸಬೇಕು. ಆನ್ ಲೈನಿನಲ್ಲಿ ಅರ್ಜಿ ಸಲ್ಲಿಸಲು ತೊಂದರೆಯಾದಲ್ಲಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ನಮೂನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ವೆಬ್‍ಸೈಟಿನಿಂದ ಪಡೆದುಕೊಳ್ಳಬೇಕು. ಸೀಟು ಲಭ್ಯತೆಯ ಬಗ್ಗೆ ಸಂಬಂಧಪಟ್ಟ ವಿಭಾಗದ ಅಧ್ಯಕ್ಷರು/ ಕಾರ್ಯಕ್ರಮಗಳ ಸಂಯೋಜಕರನ್ನು ಸಂಪರ್ಕಿಸಬಹುದು ಹಾಗೂ ಹೆಚ್ಚಿನ ಮಾಹಿತಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.mangaloreuniversity.ac.in ಮೂಲಕ ಪಡೆದುಕೊಳ್ಳಬಹುದು ಎಂದು ಕುಲಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment