ಬಂಟ್ವಾಳ, ಆಗಸ್ಟ್ 29, 2025 (ಕರಾವಳಿ ಟೈಮ್ಸ್) : ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸಹಸವಾರೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೆಟ್ಲಮುಡ್ನೂರು ಗ್ರಾಮದ ಗಣೇಶ ನಗರದ ಸ್ಟಾರ್ ಲೈಟ್ ಹೋಟೆಲ್ ಬಳಿ ಆಗಸ್ಟ್ 27 ರಂದು ಅಪರಾಹ್ನ ಸಂಭವಿಸಿದೆ.
ಗಾಯಗೊಂಡ ಸಹಸವಾರೆಯನ್ನು ಶಾಂಭವಿ ಎಂದು ಹೆಸರಿಸಲಾಗಿದೆ. ಸ್ಕೂಟರ್ ಸವಾರ ಸುಜಿತ್ ರೈ ಅವರು ತನ್ನ ಸ್ಕೂಟರಿನಲ್ಲಿ ಶಾಂಭವಿ ಅವರನ್ನು ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ನೇರಳಕಟ್ಟೆ ಭಜನಾ ಮಂದಿರ ಕಡೆಯಿಂದ ಮಾಣಿ ಕಡೆಗೆ ಚಲಾಯಿಸಿಕೊಂಡು ಬಂದು ನೆಟ್ಲಮುಡ್ನೂರು ಗ್ರಾಮದ ಗಣೇಶನಗರದ ಸ್ಟಾರ್ ಲೈಟ್ ಹೋಟೆಲ್ ಬಳಿ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಸ್ಕೂಟರ್ ಸವಾರರಿಬ್ಬರೂ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಸಹಸವಾರೆ ಶಾಂಭವಿ ಅವರ ತಲೆಯ ಹಿಂಭಾಗ, ಕುತ್ತಿಗೆಗೆ ಗಾಯಗಳಾಗಿದ್ದು ತಕ್ಷಣ ಅವರನ್ನು ಪುತ್ತೂರು ಪ್ರಗತಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment