ಬೆಳ್ತಂಗಡಿ, ಆಗಸ್ಟ್ 10, 2025 (ಕರಾವಳಿ ಟೈಮ್ಸ್) : ಫೇಸ್ ಬುಕ್ ಖಾತೆಯಲ್ಲಿ ವೈಮನಸ್ಸು ಮೂಡಿಸುವ ಸಂದೇಶ ಹಂಚಿದ ಆರೋಪದಲ್ಲಿ ಆರೋಪಿ ವಸಂತ ಗಿಳಿಯಾರ್ ಎಂಬಾತನ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ನಿವಾಸಿ ಶೇಖರ ಲಾಯಿಲ ಎಂಬವರು ದೂರು ನೀಡಿದ್ದು, ಶನಿವಾರ ಮಧ್ಯಾಹ್ನ ಅವರು ತನ್ನ ಮೊಬೈಲ್ ಪರಿಶೀಲಿಸುತ್ತಿದ್ದಾಗ, ವಸಂತ ಗಿಳಿಯಾರ್ ಎಂಬ ವ್ಯಕ್ತಿಯು, ಆತನ ಪೇಸ್ ಬುಕ್ ಖಾತೆಯಲ್ಲಿ, ಧರ್ಮಗಳ ನಡುವೆ ಹಾಗೂ ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತೆ ಸಂದೇಶಗಳನ್ನು ಪ್ರಸಾರ ಮಾಡಿರುವುದು ಕಂಡುಬಂದಿದ್ದು, ಇದರಿಂದಾಗಿ ಸಾಮಾಜಿಕ ಸ್ವಾಸ್ಥ್ಯ ಕೆಡುವ ಸಾಧ್ಯತೆಗಳಿರುತ್ತವೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/2025 ಕಲಂ 196 (1)(ಎ) 353(2) ಬಿ ಎನ್ ಎಸ್-2023 ಪ್ರಕಾರ ಪ್ರಕರಣ ದಾಖಲಾಗಿದೆ.















0 comments:
Post a Comment