ಪುತ್ತೂರು, ಸೆಪ್ಟೆಂಬರ್ 22, 2025 (ಕರಾವಳಿ ಟೈಮ್ಸ್) : ಅಕ್ರಮ ದನ ಸಾಗಾಟ ಬೇಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು ದನವನ್ನು ರಕ್ಷಿಸಿ ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರ್ಲಡ್ಕ ಎಂಬಲ್ಲಿ ಸೆ 20 ರಂದು ನಡೆದಿದೆ.
ಪ್ರಕರಣದ ಆರೋಪಿಗಳನ್ನು ಪುತ್ತೂರು ತಾಲೂಕು ತಿಂಗಳಾಡಿ ಘಟ್ಟ ಮನೆ ನಿವಾಸಿ ಪೂವಪ್ಪ ತಿಂಗಳಾಡಿ, ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ನಿವಾಸಿಗಳಾದ ಅಬ್ದುಲ್ ಕರೀಂ (38) ಹಾಗೂ ಅಬ್ದುಲ್ ಜಮೀರ್ (27) ಎಂದು ಹೆಸರಿಸಲಾಗಿದೆ.
ಸೆ 20 ರಂದು ಪುತ್ತೂರು ನಗರ ಪೊಲೀಸ್ ಠಾಣಾ ಪಿಎಸ್ಸೈ ಆಂಜನೇಯ ರೆಡ್ಡಿ ಜಿ ವಿ ಅವರ ನೇತೃತ್ವದ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಸಂಪ್ಯ ಕಡೆಯಿಂದ ಬೈಪಾಸ್ ರಸ್ತೆಯಲ್ಲಿ ಕಬಕ ಕಡೆಗೆ ಪಿಕಪ್ ವಾಹನದಲ್ಲಿ ದನ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರ್ಲಡ್ಕ ಎಂಬಲ್ಲಿ ಕೆಎ 21-ಎ-9877 ನೋಂದಣಿ ಸಂಖ್ಯೆಯ ಪಿಕಪ್ ವಾಹನವನ್ನು ನಿಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪಿಕಪ್ ಒಳಗಡೆ ಒಂದು ದನವನ್ನು ಕಟ್ಟಿ ಹಾಕಿದ್ದು, ಸದ್ರಿ ದನ ಸಾಗಾಟಕ್ಕೆ ಚಾಲಕನಲ್ಲಿ ಯಾವುದೇ ಪರವಾನಿಗೆ ಇರುವುದಿಲ್ಲ. ಸದ್ರಿ ದನವನ್ನು ತಿಂಗಳಾಡಿ ಗಟ್ಟ ಮನೆ ಎಂಬಲ್ಲಿಯ ಪೂವಪ್ಪ ಎಂಬವರಿಂದ 17 ಸಾವಿರ ರೂಪಾಯಿಗೆ ಖರೀದಿ ಮಾಡಿ ತಂದಿದ್ದು ಕೆದಿಲದ ಒಂದು ಮನೆಯಲ್ಲಿ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಬಂದಿರುವುದಾಗಿ ಚಾಲಕ ತಿಳಿಸಿದ್ದಾನೆ. ಪ್ರಸ್ತುತ ದನವನ್ನು ಪೆÇಲೀಸರು ರಕ್ಷಣೆ ಮಾಡಿದ್ದು, ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2025 ಕಲಂ 4, 5, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ 66 ಜೊತೆಗೆ 192(ಎ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment