ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಸುಳ್ಳು ದೂರಿನ ಬಗ್ಗೆ ಕೋರ್ಟಿಗೆ ಅಂತಿಮ ಬಿ ವರದಿ ಸಲ್ಲಿಸಿದ ಪೊಲೀಸರು : ಫೇಸ್ ಬುಕ್ಕಿನಲ್ಲಿ ದ್ವೇಷ ಸಂದೇಶ ಹರಡಿದವನ ಮೇಲೆ ಕೇಸು - Karavali Times ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಸುಳ್ಳು ದೂರಿನ ಬಗ್ಗೆ ಕೋರ್ಟಿಗೆ ಅಂತಿಮ ಬಿ ವರದಿ ಸಲ್ಲಿಸಿದ ಪೊಲೀಸರು : ಫೇಸ್ ಬುಕ್ಕಿನಲ್ಲಿ ದ್ವೇಷ ಸಂದೇಶ ಹರಡಿದವನ ಮೇಲೆ ಕೇಸು - Karavali Times

728x90

10 September 2025

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಸುಳ್ಳು ದೂರಿನ ಬಗ್ಗೆ ಕೋರ್ಟಿಗೆ ಅಂತಿಮ ಬಿ ವರದಿ ಸಲ್ಲಿಸಿದ ಪೊಲೀಸರು : ಫೇಸ್ ಬುಕ್ಕಿನಲ್ಲಿ ದ್ವೇಷ ಸಂದೇಶ ಹರಡಿದವನ ಮೇಲೆ ಕೇಸು

ಬಂಟ್ವಾಳ, ಸೆಪ್ಟೆಂಬರ್ 10, 2025 (ಕರಾವಳಿ ಟೈಮ್ಸ್) : ಸಜೀಪಮುನ್ನೂರು ಗ್ರಾಮದ ನಂದಾವರ ನಿವಾಸಿ ಉಮ್ಮರ್ ಫಾರೂಕ್ (48) ಎಂಬಾತ ಜೂನ್ 13 ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 68/2025 ಕಲಂ 109, 324(4), ಜೊತೆಗೆ 3(5) ಬಿ ಎನ್ ಎಸ್ ಪ್ರಕಾರ ರಂತೆ ಪ್ರಕರಣ ದಾಖಲಾಗಿ ಪ್ರಕರಣದಲ್ಲಿ ತನಿಖೆ ಪೆÇರೈಸಿ ಸುಳ್ಳು ದೂರು ನೀಡಿದ್ದಾರೆಂದು ಮನಗಂಡ ಪೊಲೀಸರು ಈ ಬಗ್ಗೆ ನ್ಯಾಯಾಲಯಕ್ಕೆ ಬಿ ಅಂತಿಮ ವರದಿ ಸಲ್ಲಿಸಿದ್ದಾರೆ. 

ನಂತರ ಸುಳ್ಳು ದೂರು ನೀಡಿದ ಉಮರ್ ಫಾರೂಕ್ ಮೇಲೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2025 ಕಲಂ 192, 353(1)(ಬಿ), 230(1), 248(ಎ) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಉಮರ್ ಫಾರೂಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ರಫ್ ತಲಪಾಡಿ ಎಂಬಾತ ತನ್ನ ಪೇಸ್ ಬುಕ್ ಖಾತೆಯಲ್ಲಿ ಸುಳ್ಳು ಸುದ್ದಿ ಹರಡಿರುವುದಾಗಿದೆ. ಇದರ ಮುಂದುವರಿದ ಭಾಗವಾಗಿ ರಿಯಾಜ್ ಕಡಂಬು ಎಂಬಾತ ಈ ವಿಚಾರವಾಗಿ  ತನಿಖೆಯಲ್ಲಿರುವ ಪ್ರಕರಣ ಬಗ್ಗೆ ಅಶ್ರಫ್ ತಲಪಾಡಿ ಅವರಿಗೆ ನೀಡಿದ ನೋಟೀಸಿನ ಬಗ್ಗೆ ಸತ್ಯಾಸತ್ಯತೆ ತಿಳಿಯದೇ ಅಪೂರ್ಣವಾದ ಮಾಹಿತಿಯೊಂದಿಗೆ ಸಂಬಂಧವಿಲ್ಲದ ಎರಡು ಘಟನೆಗಳನ್ನು ಹೋಲಿಕೆ ಮಾಡಿ ಧರ್ಮದ ಆಧಾರದಲ್ಲಿ ಸಂಬಂಧವನ್ನು ಕಲ್ಪಿಸಿ, ಸಾಮಾಜಿಕ ಜಾಲ ತಾಣವಾದ ತನ್ನ ಪೇಸ್ ಬುಕ್ ಖಾತೆಯಲ್ಲಿ ಆಗಸ್ಟ್ 30 ರಂದು ಹರಿಬಿಟ್ಟು ಪೊಲೀಸ್ ಇಲಾಖೆಯ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಕಟಿಸಿ, ಜನರು ಸಾರ್ವಜನಿಕ ನೆಮ್ಮದಿಯ ವಿರುದ್ದ ಅಪರಾಧ ಎಸಗುವಂತೆ ಪ್ರೇರೆಪಿಸಿ ಜಾತಿ-ಧರ್ಮದ ಆಧಾರದ ಮೇಲೆ ವೈರತ್ವ, ದ್ವೇಷ ಅಥವಾ ವೈಮನಸ್ಸು ಭಾವನೆಗಳನ್ನು ಬೆಳೆಸಲು ಪ್ರಯತ್ನಿಸಿರುತ್ತಾನೆ ಎಂದು ಆರೋಪಿಸಿ ಈತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 134/2025 ಕಲಂ 353(2) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಸುಳ್ಳು ದೂರಿನ ಬಗ್ಗೆ ಕೋರ್ಟಿಗೆ ಅಂತಿಮ ಬಿ ವರದಿ ಸಲ್ಲಿಸಿದ ಪೊಲೀಸರು : ಫೇಸ್ ಬುಕ್ಕಿನಲ್ಲಿ ದ್ವೇಷ ಸಂದೇಶ ಹರಡಿದವನ ಮೇಲೆ ಕೇಸು Rating: 5 Reviewed By: karavali Times
Scroll to Top